Saturday, June 6, 2026
Homeಕರಾವಳಿಶಾಸಕ ಹರೀಶ್ ಪೂಂಜಾ ಬೇಗ ಗುಣಮುಖರಾಗಲು ಕ್ಷೇತ್ರದ ಜನತೆಯಿಂದ 'ಸರ್ವಸೇವಾ' ಪೂಜೆ

ಶಾಸಕ ಹರೀಶ್ ಪೂಂಜಾ ಬೇಗ ಗುಣಮುಖರಾಗಲು ಕ್ಷೇತ್ರದ ಜನತೆಯಿಂದ ‘ಸರ್ವಸೇವಾ’ ಪೂಜೆ

- Advertisement -
- Advertisement -

ಬೆಳ್ತಂಗಡಿ: ಮೂರು ದಿನಗಳ ಹಿಂದೆ ತಾಲೂಕಿನ ಶಾಸಕ ಹರೀಶ್ ಪೂಂಜಾಗೆ ಕೊರೋನಾ ಸೋಂಕು ಇರುವುದು ದೃಢವಾಗಿತ್ತು. ಈ ಹಿನ್ನಲೆಯಲ್ಲಿ ಹರೀಶ್ ಪೂಂಜಾರವರು ಶೀಘ್ರ ಗುಣಮುಖರಗಲಿ ಎಂದು ತಾಲೂಕಿನ ಪದ್ಮುಂಜ ಸಮೀಪದ ಕುರಾಯ ಸದಾಶಿವ ದೇವಸ್ಥಾನ ದಲ್ಲಿ ಕಾರ್ಯಕರ್ತ ಅಭಿಮಾನಿ ಗಳು ಮತ್ತು ಊರವರು ಸೇರಿ ಸರ್ವ ಸೇವಾ ಪೂಜೆ ಯನ್ನು ನೆರೆವೇರಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ ಕೃಷ್ಣಯ್ಯ ಆಚಾರ್ಯ, ಗ್ರಾಮ ಪಂಚಾಯತ್ ಸದಸ್ಯರಾದ ದಿನೇಶ್ ಕಂಡಿಗ, ಹಾಗೂ ಪ್ರಮುಖರಾದ ಅಶೋಕ್ ಭಟ್,ಧರ್ಣಪ್ಪ ಗೌಡ,ಬಾಬು ಗೌಡ, ಕುಶಾಲಪ್ಪ ಗೌಡ, ರಾಮಣ್ಣ ಗೌಡ ಹಾಗೂ ಊರವರು ಉಪಸ್ಥಿತರಿದ್ದರು.

ದೇವಸ್ಥಾನಕ್ಕೂ ಹರೀಶ್ ಪೂಂಜಾರಿಗೂ ಅವಿನಾಭಾವ ಸಂಬಂಧ :
2017ರಲ್ಲಿ ಕುರಾಯ ಶ್ರೀ ಸದಾಶಿವ ದೇವಸ್ಥಾನದ ನವೀಕರಣ ಪುನರ್‌ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶಾಭಿಷೇಕ ಮತ್ತು ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಹರೀಶ್‌ ಪೂಂಜರೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ದೇವರ ಸೇವೆ ಮಾಡಿದ್ದರು.

ಹೇಗಿದೆ ಶಾಸಕರ ಆರೋಗ್ಯ
ಸಣ್ಣ ಮಟ್ಟಿನ ಜ್ವರ ಹೊರತುಪಡಿಸಿ ಬೇರೆ ಯಾವುದೇ ಲಕ್ಷಣಗಳಿಲ್ಲದೆ ಇರುವುದರಿಂದ ಶಾಸಕ ಹರೀಶ್ ಪೂಂಜಾರು ತಮ್ಮ ಮನೆಯಲ್ಲಿಯೇ ಇದ್ದು, ಅಲ್ಲಿಂದಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

Latest News

error: Content is protected !!