Thursday, June 4, 2026
Homeಕರಾವಳಿಮಂಗಳೂರು; ಕೋರ್ಟ್ ನಿಂದ ವಾಪಾಸ್ ಜೈಲಿಗೆ ಬರುವಾಗ ವಿಚಾರಣಾಧೀನ ಕೈದಿಯಲ್ಲಿ ಗಾಂಜಾ ಪತ್ತೆ

ಮಂಗಳೂರು; ಕೋರ್ಟ್ ನಿಂದ ವಾಪಾಸ್ ಜೈಲಿಗೆ ಬರುವಾಗ ವಿಚಾರಣಾಧೀನ ಕೈದಿಯಲ್ಲಿ ಗಾಂಜಾ ಪತ್ತೆ

- Advertisement -
- Advertisement -

ಮಂಗಳೂರು: ಕೋರ್ಟ್ ಗೆ ಹಾಜರಾಗಿ ವಾಪಾಸ್ ಜೈಲಿಗೆ ಬರುವ ವೇಳೆ ವಿಚಾರಣಾಧೀನ ಕೈದಿಯಲ್ಲಿ ಗಾಂಜಾ ಪತ್ತೆಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.  

ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಮುಹಮ್ಮದ್ ಅಸ್ರು ಯಾನೆ ಮುಹಮ್ಮದ್ ಅಲಿ ಎಂಬಾತನನ್ನು ಇತರ ವಿಚಾರಣಾಧೀನ ಕೈದಿಗಳೊಂದಿಗೆ ಜ.23ರಂದು ಬಂಟ್ವಾಳದ ನ್ಯಾಯಾಲಯಕ್ಕೆ ಡಿಎಆರ್ ಬೆಂಗಾವಲಿನ ಮೂಲಕ ಕಳುಹಿಸಿಕೊಡಲಾಗಿತ್ತು . ಅಲ್ಲಿಂದ ಮರಳಿ ಜೈಲಿಗೆ ಬರುವಾಗ ಮುಖ್ಯದ್ವಾರದಲ್ಲಿ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದಾಗ ಆತನ ಬಳಿ ಪ್ಯಾಕ್ ಮಾಡಿಟ್ಟ ಗಾಂಜಾ ಪತ್ತೆಯಾಗಿದೆ . ಈ ಬಗ್ಗೆ ಬರ್ಕೆ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.

- Advertisement -

Latest News

error: Content is protected !!