Friday, January 27, 2023
Homeಕರಾವಳಿಮಂಗಳೂರು: ಭೋಪಾಲ್ ನಲ್ಲಿ ಮೃತಪಟ್ಟ ಯೋಧನ ಪಾರ್ಥೀವ ಶರೀರ ಹುಟ್ಟೂರಿಗೆ ಆಗಮನ

ಮಂಗಳೂರು: ಭೋಪಾಲ್ ನಲ್ಲಿ ಮೃತಪಟ್ಟ ಯೋಧನ ಪಾರ್ಥೀವ ಶರೀರ ಹುಟ್ಟೂರಿಗೆ ಆಗಮನ

- Advertisement -
- Advertisement -

ಮಂಗಳೂರು: ಮಧ್ಯಪ್ರದೇಶ ಭೋಪಾಲ್‌ನಲ್ಲಿ ಕರ್ತವ್ಯದ ವೇಳೆ ಹೃದಯಾಘಾತದಿಂದ ಮೃತಪಟ್ಟ ಮಂಗಳೂರಿನ ಪದವು ಗ್ರಾಮದ ಶಕ್ತಿನಗರ ಮೊಗರೋಡಿ ನಿವಾಸಿ ಯೋಧ ಮುರಳೀಧರ್ ಬಿ.ಎಸ್. (37) ಅವರ ಪಾರ್ಥಿವ ಶರೀರವನ್ನು ಮಂಗಳವಾರ ವಿಮಾನದ ಮೂಲಕ ತರಲಾಗಿದೆ.

ಆರು ತಿಂಗಳ ಹಿಂದೆ ಊರಿಗೆ ಬಂದಿದ್ದ ಅವರು ವರ್ಷದ ಹಿಂದೆ ಅಗಲಿದ್ದ ತನ್ನ ತಾಯಿಯ ಮೊದಲ ವರ್ಷದ ಕಾರ್ಯಕ್ರಮದಲ್ಲಿ ಭಾಗವಹಿಸುವ ಕೆಲವೇ ದಿನಗಳಲ್ಲಿ ಊರಿಗೆ ಮರಳುವವರಿದ್ದರು. ಅದಕ್ಕಾಗಿ 20 ದಿನಗಳ ರಜೆಯೂ ಮಂಜೂರಾಗಿತ್ತು. ಊರಿಗೆ ಮರಳಲು ತಯಾರಿ ನಡೆಸುತ್ತಿದ್ದಾಗಲೇ ಹೃದಯಾಘಾತವಾಗಿದೆ ಎಂದು ಮುರಳೀಧರರ ಕುಟುಂಬದ ಮೂಲಗಳು ತಿಳಿಸಿವೆ.

ಯೋಧ ಮುರಳೀಧರ್‌ರ ಪಾರ್ಥೀವ ಶರೀರಕ್ಕೆ ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್., ದ.ಕ.ಜಿಪಂ ಸಿಇಒ ಡಾ.ಕುಮಾರ್, ಮಂಗಳೂರು ಉಪವಿಭಾಗಾಧಿಕಾರಿ ಮದನ್‌ಮೋಹನ್ ಮತ್ತಿತರರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಜಿಲ್ಲಾಡಳಿತದ ವತಿಯಿಂದ ಗೌರವ ಸಲ್ಲಿಸಿದರು.

ಪಾರ್ಥಿವ ಶರೀರವನ್ನು ಇದೀಗ ಎ.ಜೆ. ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ. ಇಂದು ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!