Saturday, June 6, 2026
Homeತಾಜಾ ಸುದ್ದಿಇದು ಕರ್ನಾಟಕದ ಜನತೆಯೇ ತಲೆ ತಗ್ಗಿಸುವ ಘಟನೆ: ಆಸ್ಪತ್ರೆಯಲ್ಲೇ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ

ಇದು ಕರ್ನಾಟಕದ ಜನತೆಯೇ ತಲೆ ತಗ್ಗಿಸುವ ಘಟನೆ: ಆಸ್ಪತ್ರೆಯಲ್ಲೇ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ

- Advertisement -
- Advertisement -

ಶಿವಮೊಗ್ಗ : ಇಲ್ಲಿನ  ಮೆಗ್ಗಾನ್ ಬೋಧನಾ ಆಸ್ಪತ್ರೆ (ಸಿಮ್ಸ್)ನಲ್ಲಿ ಕೋವಿಡ್‍ನಿಂದ ಬಳಲುತ್ತಿದ್ದ ತಾಯಿಯ ಆರೈಕೆಯಲ್ಲಿದ್ದ 16 ವರ್ಷದ ಬಾಲಕಿಯನ್ನು ಊಟ ಕೊಡಿಸುವ ನೆಪದಲ್ಲಿ ಕರದೊಯ್ದ ವಾರ್ಡ್ ಬಾಯ್ ಮತ್ತು ಆತನ ಮೂವರು ಸ್ನೇಹಿತರು, ಕಾರಿನಲ್ಲೇ ಅತ್ಯಾಚಾರ ಎಸಗಿದ್ದಾರೆ.


ಇನ್ನು ವಾರ್ಡ್ ಬಾಯ್ ಮನೋಜ್ ಮತ್ತು ಸ್ನೇಹಿತರು ಹಲವು ದಿನಗಳಿಂದ ಇದಕ್ಕಾಗಿ ಯೋಜನೆ ರೂಪಿಸಿದ್ದರೆಂದು ಹೇಳಲಾಗುತ್ತಿದೆ. ಬಾಲಕಿಯನ್ನು ಊಟಕ್ಕೆ ಕರೆದೊಯ್ಯವ ಉದ್ದೇಶದಿಂದಲೇ ಒಂದು ಗಂಟೆ ಮೊದಲೇ ಆಸ್ಪತ್ರೆ ಆವರಣದಲ್ಲಿ ಕಾರನ್ನು ತಂದು ನಿಲ್ಲಿಸಿಕೊಂಡಿದ್ದರು.

ವಾರ್ಡ್ ಬಾಯ್‍ಗೆ ಪರಿಚಯವಾಗಿದ್ದ ಬಾಲಕಿಯ ಬಳಿ  ಕೋಮು ಗಲಭೆಯಿಂದಾಗಿ ಶಿವಮೊಗ್ಗ ನಗರ ಮೂರು ದಿನದಿಂದ ಸಂಪೂರ್ಣ ಬಂದ್ ಆಗಿದ್ದರಿಂದ ಶನಿವಾರ ರಾತ್ರಿ ಹೊರಗೆ ಊಟಕ್ಕೆ ಕಾರಿನಲ್ಲಿ ಕರೆದೊಯ್ಯುವುದಾಗಿ ಹೇಳಿದ್ದ. ಆತನನ್ನು ನಂಬಿದ ಬಾಲಕಿಯು ಕಾರಿನಲ್ಲಿ ಹೋಗಿದ್ದಾಳೆ.

ಕಾರಿನಲ್ಲಿ ಮನೋಜ್ ಅಲ್ಲದೆ, ಪ್ರಜ್ವಲ್, ವಿನಯ್ ಅಲ್ಲದೆ ಮತ್ತೊಬ್ಬ ಇದ್ದ. ಹಿಂದಿನ ಸೀಟಿನಲ್ಲಿ ಕುಳಿತಿದ್ದ ಬಾಲಕಿ ಮೇಲೆ ಮನೋಜ್ ಅತ್ಯಾಚಾರ ಎಸಗಿದ್ದಾನೆ. ಅದಾದ ಬಳಿಕ ಆತನ ಮೂವರು ಸ್ನೇಹಿತರು ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ.

ಘಟನೆಯಿಂದ ಮಾನಸಿಕ ಆಘಾತಕ್ಕೆ ಒಳಗಾದ ಬಾಲಕಿ ತಾಯಿಗೆ ವಿಚಾರ ತಿಳಿಸಿದ್ದಾಳೆ. ಬಳಿಕ ಸಖಿ ಕೇಂದ್ರದವರಿಗೆ ವಿಷಯ ತಿಳಿದು, ದೊಡ್ಡಪೇಟೆ ಠಾಣೆ ಪೊಲೀಸರು ಮನೋಜ್ ನನ್ನು ಬಂಧಿಸಿದ್ದು ಉಳಿದ ಮೂವರಿಗೆ ಬಲೆ ಬೀಸಿದ್ದಾರೆ. ಗ್ಯಾಂಗ್ ರೇಪ್‍ನಿಂದ ಸುದ್ದಿ ಹೊರ ಬೀಳುತ್ತಿದ್ದಂತೆ ಇಡೀ ಶಿವಮೊಗ್ಗವೇ ಬೆಚ್ಚಿ ಬಿದ್ದಿದೆ.

- Advertisement -

Latest News

error: Content is protected !!