Friday, May 3, 2024
Homeತಾಜಾ ಸುದ್ದಿಅನಾಥ ಯುವತಿಯನ್ನು ಮಗಳಂತೆ ಸಾಕಿ ಹಿಂದೂ ಸಂಪ್ರದಾಯದಂತೆ ವಿವಾಹ ಮಾಡಿದ ಮುಸ್ಲೀಂ ಕುಟುಂಬ

ಅನಾಥ ಯುವತಿಯನ್ನು ಮಗಳಂತೆ ಸಾಕಿ ಹಿಂದೂ ಸಂಪ್ರದಾಯದಂತೆ ವಿವಾಹ ಮಾಡಿದ ಮುಸ್ಲೀಂ ಕುಟುಂಬ

spot_img
- Advertisement -
- Advertisement -

ಕೇರಳ ​: ಇಲ್ಲಿನ ತ್ರಿಪ್ರಯಾರ್ ಪಟ್ಟಣವೂ ವಿಶಿಷ್ಟ ಮದುವೆಯೊಂದಕ್ಕೆ ಸಾಕ್ಷಿಯಾಗಿದೆ. ರಾಜ್ಯ ಅಥವಾ ಧರ್ಮವನ್ನೂ ಮೀರಿದ ಮದುವೆಯಾಗಿದ್ದು, 14 ವರ್ಷಗಳ ಹಿಂದೆ ದಾರಿಯಲ್ಲಿ ಅನಾಥವಾಗಿ ಸಿಕ್ಕ ಹಿಂದು ಹುಡುಗಿಯನ್ನು ಸ್ವಂತ ಮಗಳಂತೆ ಬೆಳೆಸಿ, ಹಿಂದು ಸಂಪ್ರದಾಯದಂತೆಯೇ ಮುಸ್ಲಿಂ ಕುಟುಂಬ ಮದುವೆ ಮಾಡಿಕೊಟ್ಟು ಮಾನವೀಯತೆ ಮೆರೆದಿದೆ.

ವಾಯುಸೇನಾ ಅಧಿಕಾರಿಯಾಗಿರುವ ತ್ರಿಪ್ರಯಾರ್ ಮೂಲದ ರಜಾಕ್​, ತಮಿಳುನಾಡು ಮೂಲದ ಕವಿತಾಳನ್ನು 8ನೇ ವಯಸ್ಸಿನಿಂದಲೂ ಪೋಷಿಸಿದ್ದಾರೆ. ಅನಾಥವಾಗಿ ದಾರಿಯಲ್ಲಿ ಅಲೆದಾಡುತ್ತಿದ್ದ ಕವಿತಾಳನ್ನು ಕರೆತಂದು ರಜಾಕ್​ ತನ್ನ ಸ್ವಂತ ಮಗಳಂತೆ ಬೆಳೆಸಿದ್ದಾರೆ.

ರಜಾಕ್​ಗೆ ಮೂವರು ಹೆಣ್ಣು ಮಕ್ಕಳಿದ್ದು, ಕವಿತಾಳನ್ನು ತಮ್ಮ ನಾಲ್ಕನೇ ಮಗಳಂತೆ ರಜಾಕ್ ಮತ್ತು ಪತ್ನಿ ಸಾಕಿ ಸಲುಹಿದ್ದಾರೆ. ಹಲವು ವರ್ಷಗಳ ಬಳಿಕ ಕವಿತಾಳಿಗೆ ತಮ್ಮ ಸ್ವಂತ ಪಾಲಕರ ಪರಿಚಯವು ಆಗಿದೆ. ಸೇಲಂನಲ್ಲಿರುವ ಕವಿತಾ ಪಾಲಕರು ವರ್ಷಕ್ಕೊಮ್ಮೆ ಭೇಟಿ ಮಾಡಿಯು ಹೋಗುತ್ತಾರೆ. ಕಳೆದ 14 ವರ್ಷಗಳಲ್ಲಿ ಎರಡು ಬಾರಿ ಮಾತ್ರ ಕವಿತಾ ತನ್ನ ಪಾಲಕರ ಮನೆಗೆ ಭೇಟಿ ನೀಡಿದ್ದಾಳೆ.

ಕವಿತಾ ಸುಲಭವಾಗಿ ಕೇರಳ ಜೀವನಶೈಲಿಗೆ ಒಗ್ಗಿಕೊಂಡಿದ್ದು, ರಜಾಕ್​ ಕುಟುಂಬದ ಪ್ರೀತಿಯ ಮಗಳಾಗಿದ್ದಾಳೆ. ಹೀಗಾಗಿ ಆಕೆಯ ಜವಬ್ದಾರಿಯನ್ನು ತಾನೇ ಹೊತ್ತುಕೊಂಡ ರಜಾಕ್​, ವರನನ್ನು ಹುಡುಕಿ ಹಿಂದು ಸಂಪ್ರದಾಯದಂತೆಯೇ ಮದುವೆಯನ್ನು ವಿಜೃಂಭಣೆಯಿಂದ ಮಾಡಿಕೊಟ್ಟಿದ್ದಾರೆ.

ಖಾಸಗಿ ಕಂಪನಿಯ ಉದ್ಯೋಗಿ ಮತ್ತು ಫೋಟೋಗ್ರಾಫರ್​ ಆಗಿರುವ ನಾಟ್ಟಿಕಾ ಮೂಲದ ಶ್ರೀಜಿತ್​ ಜತೆ ಕವಿತಾ ವಿವಾಹ ನಡೆದಿದೆ. ಶ್ರೀಜಿತ್​, ಅವರು ಅಲಂಕಾರಿಕ ಮೀನಿನ ಜಮೀನನ್ನು ಸಹ ಹೊಂದಿದ್ದಾರೆ. ರಜಾಕ್​ ಅವರು ತಮ್ಮದೇ ಮನೆಯಲ್ಲಿ ವಿವಾಹ ಮಾಡಿಕೊಟ್ಟಿದ್ದಾರೆ.

ಕವಿತಾಳಿಗೆ ಉಡುಗೊರೆಯಾಗಿ ತಮ್ಮ ಮನೆಯ ಸಮೀಪದಲ್ಲೇ ರಜಾಕ್​ ಅವರು ಹೊಸ ಮನೆಯೊಂದನ್ನು ನಿರ್ಮಿಸಿದ್ದಾರೆ. ಇದರೊಂದಿಗೆ ರಜಾಕ್​ ಹೆಣ್ಣುಮಕ್ಕಳು ಕವಿತಾಗಾಗಿ 12 ಸವರನ್​ ಚಿನ್ನವನ್ನು ಗಿಫ್ಟ್​ ಆಗಿ ನೀಡಿದ್ದಾರೆ. ಕವಿತಾಳ ಪಾಲಕರು ಮತ್ತು ಇಬ್ಬರು ಸಹೋದರಿಯರು ಕೂಡ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. 

- Advertisement -
spot_img

Latest News

error: Content is protected !!