Friday, June 5, 2026
Homeತಾಜಾ ಸುದ್ದಿವಿಡಿಯೋ: ಕಬಡ್ಡಿ ಪಂದ್ಯಾವಳಿಯ ವೇಳೆ ಗ್ಯಾಲರಿ ಕುಸಿತ: 100ಕ್ಕೂ ಹೆಚ್ಚು ಮಂದಿಗೆ ಗಾಯ

ವಿಡಿಯೋ: ಕಬಡ್ಡಿ ಪಂದ್ಯಾವಳಿಯ ವೇಳೆ ಗ್ಯಾಲರಿ ಕುಸಿತ: 100ಕ್ಕೂ ಹೆಚ್ಚು ಮಂದಿಗೆ ಗಾಯ

- Advertisement -
- Advertisement -

ತೆಲಂಗಾಣ: ಕಬಡ್ಡಿ ಪಂದ್ಯಾವಳಿಯ ವೇಳೆ ಗ್ಯಾಲರಿ ಕುಸಿದು 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ತೆಲಂಗಾಣದ ಸೂರ್ಯಪೇಟಾ ಜಿಲ್ಲೆಯಲ್ಲಿ ನಡೆದಿದೆ.

ನಿನ್ನೆ ಸೂರ್ಯಪೇಟಾದಲ್ಲಿ  47 ನೇ ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯಲ್ಲಿ  ಆಯೋಜಿಸಲಾಗಿತ್ತು. ಈ ವೇಳೆ ಗ್ಯಾಲರಿ ಕುಸಿದಿದೆ. 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತದ ಸಮಯದಲ್ಲಿ ಗ್ಯಾಲರಿಯಲ್ಲಿ 1500 ಪ್ರೇಕ್ಷಕರು ಇದ್ದರೂ ಎನ್ನಲಾಗಿದೆ. ಸಾಮರ್ಥ್ಯವನ್ನು ಮೀರಿ ಪ್ರೇಕ್ಷಕರಿಗೆ ಅವಕಾಶ ನೀಡಿದಕ್ಕೆ ಅನಾಹುತಕ್ಕೆ ಕಾರಣ ಎನ್ನಲಾಗಿದೆ. ಅಂದ್ಹಾಗೆ 20 ಅಡಿ ಎತ್ತರ ಹಾಗೂ 40 ಅಡಿ ಅಗಲವಿದ್ದ ಗ್ಯಾಲರಿಯಲ್ಲಿ ಸಾಮಥ್ರ್ಯ ಮೀರಿ ಪ್ರೇಕ್ಷಕರು ಕೂತಿದ್ದರಿಂದ ಈ ಅವಘಡ ಸಂಭವಿಸಿದೆ.

- Advertisement -

Latest News

error: Content is protected !!