Saturday, June 6, 2026
Homeಇತರಮಂಗಳಗೌರಿ ಮದುವೆ ಧಾರವಾಹಿಯ ನಾಯಕ ಪಾತ್ರಕ್ಕೆ ರಾಜೀನಾಮೆ ನೀಡಿದ ಗಗನ್ ಚಿನ್ನಪ್ಪ..! ಅಷ್ಟಕ್ಕೂ ಕಾರಣ ಏನು...

ಮಂಗಳಗೌರಿ ಮದುವೆ ಧಾರವಾಹಿಯ ನಾಯಕ ಪಾತ್ರಕ್ಕೆ ರಾಜೀನಾಮೆ ನೀಡಿದ ಗಗನ್ ಚಿನ್ನಪ್ಪ..! ಅಷ್ಟಕ್ಕೂ ಕಾರಣ ಏನು ಗೊತ್ತಾ ?

- Advertisement -
- Advertisement -

ಕನ್ನಡ ಕಿರತೆರೆ ಸೂಪರ್​ ಹಿಟ್​ ಧಾರಾವಾಹಿ ಮಂಗಳಗೌರಿ ತಂಡದಿಂದ ಒಂದು ಬ್ಯಾಡ್​ ನ್ಯೂಸ್ ​​ ಬಂದಿದೆ. ಕನ್ನಡದ ಟಾಪ್ 5 ಧಾರಾವಾಹಿಗಳಲ್ಲಿ ‘ಮಂಗಳಗೌರಿ ಮದುವೆ’ ಕೂಡ ಒಂದು. ಧಾರಾವಾಹಿಯಿಂದ ನಟ ಗಗನ್​ ಚಿನ್ನಪ್ಪ ಹೊರಬಿದ್ದಿದ್ದಾರೆ ಸ್ವತಃ ಗಗನ್ ಚಿನ್ನಪ್ಪ ಅವರೇ ಈ ವಿಷಯವನ್ನು ಅಧಿಕೃತಪಡಿಸಿದ್ದಾರೆ. ಈ ಧಾರಾವಾಹಿಯಲ್ಲಿ ಅವರು ನಾಯಕನ ಪಾತ್ರ ಮಾಡಿದ್ದರು. ಖಡಕ್​ ಪೊಲೀಸ್​ ಅಧಿಕಾರಿಯ ಪಾತ್ರದಲ್ಲಿ ಗಗನ್​ ಕಾಣಿಸಿಕೊಂಡಿದ್ದರು. ಈ ಪಾತ್ರ ಜನರಿಗೆ ಬಹಳ ಅಚ್ಚುಮೆಚ್ಚು. ಈ ಪಾತ್ರದಲ್ಲಿ ಕರುನಾಡಿಗೆ ಗಗನ್​ ಚಿನ್ನಪ್ಪ ಪರಿಚಯವಾಗಿದ್ದರು. ಆದರೆ ಹೀಗೆ ಏಕಾಏಕಿ ಧಾರಾವಾಹಿಯಿಂದ ಹೊರ ನಡೆದಿರುವುದು ಆ ಸೀರಿಯಲ್​ ಪ್ರೇಮಿಗಳಿಗೆ ಬೇಸರ ತರಿಸಿದೆ.

“ನಾನು ಧಾರಾವಾಹಿಯಿಂದ ಹೊರನಡೆದಿರೋದು ಸತ್ಯ. ನನಗೆ ಒಂದು ಬದಲಾವಣೆ ಬೇಕಿತ್ತು. ಹೀಗಾಗಿ ಈ ನಿರ್ಧಾರ ಮಾಡಿದೆ. ಸದ್ಯ ಯಾವುದೇ ಧಾರಾವಾಹಿಯನ್ನು ಒಪ್ಪಿಕೊಂಡಿಲ್ಲ. ನನ್ನ ಬಳಿ ಈಗ ಮೂರು ಸಿನಿಮಾಗಳಿವೆ. ಅದರ ಕಡೆಗೆ ಗಮನ ಕೊಡಬೇಕಿದೆ. ಎಲ್ಲವೂ ಫೈನಲ್ ಆದನಂತರದಲ್ಲಿ ನಾನು ಹೆಚ್ಚಿನ ಮಾಹಿತಿ ನೀಡುವೆ” ಗಗನ್ ಚಿನ್ನಪ್ಪರವರು ಹೇಳಿದ್ದಾರೆ.

ಗಗನ್ ಚಿನ್ನಪ್ಪ ಅವರಿಗೆ ಸಿನಿಮಾ ಮಾಡಬೇಕು ಎನ್ನೋದು ಅನೇಕ ವರ್ಷಗಳ ಕನಸು. ಈ ಹಿಂದೆಯೇ ಕೂಡ ನಟಿಸುವ ಆಸೆ ಹೊರಹಾಕಿದ್ದರು, ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿರುವುದಕ್ಕಾಗಿ ಹೇಳಿದ್ದರು. ಬಿಗ್ ಬಾಸ್ ಮಿನಿ ಸೀಸನ್‌ನಲ್ಲಿಯೂ ಗಗನ್ ಚಿನ್ನಪ್ಪ ಭಾಗವಹಿಸಿ, ಉತ್ತಮ ಆಟ ಪ್ರದರ್ಶನ ತೋರಿಸಿದ್ದರು. ಬಿಗ್​ ಬಾಸ್​ ಮಿನಿ ಶೋನಲ್ಲೂ ಅದ್ಬುತ ಪರ್ಫಾಮೆನ್ಸ್​ ನೀಡಿ ಮೆಚ್ಚುಗೆ ಗಳಸಿಕೊಂಡಿದ್ದರು. ತುಂಬಾ ಜನ ಕಿರುತೆರೆಯಲ್ಲಿ ಸ್ಟಾರ್​ ಆಗುತ್ತಿದ್ದಂತ ಬೆಳ್ಳಿತೆರೆಗೆ ಜೀಗಿಯುತ್ತಾರೆ. ಕಿರುತೆರೆಯಲ್ಲಿ ಹೆಸರು ಬರುತ್ತಿದ್ದಂತೆ ಸಿನಿಮಾ ಮಾಡಲು ಸೀರಿಯಲ್​ ಬಿಟ್ಟು ಹೋಗಿರುವುದನ್ನು ನಾವು ನೋಡಿದ್ದೇವೆ.

ಇನ್ನು ಗಗನ್ ಚಿನ್ನಪ್ಪ ಕೊಡಗಿನವರಾಗಿದ್ದು. ಅವರ ತಂದೆಗೆ ಪಿತ್ರಾರ್ಜಿತ ಆಸ್ತಿ ಕೂಡ ಇದೆ. ಅದನ್ನು ನೋಡಿಕೊಂಡು ಕೃಷಿ ಮಾಡಬೇಕು ಎಂಬುದು ಗಗನ್ ಆಸೆ. ಚಿಕ್ಕ ವಯಸ್ಸಿನಿಂದಲೂ ಕೃಷಿ ಮಾಡಬೇಕು ಎಂದು ಗಗನ್ ಆಸೆ ಇಟ್ಟುಕೊಂಡಿದ್ದಾರಂತೆ.

- Advertisement -

Latest News

error: Content is protected !!