Wednesday, April 16, 2025
Homeಕರಾವಳಿಉಡುಪಿಡಾ| ಟಿಎಂಎ ಪೈ ಆಸ್ಪತ್ರೆಯಲ್ಲಿ ಮಾ.21, 22ರಂದು ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆ

ಡಾ| ಟಿಎಂಎ ಪೈ ಆಸ್ಪತ್ರೆಯಲ್ಲಿ ಮಾ.21, 22ರಂದು ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆ

spot_img
- Advertisement -
- Advertisement -

ಉಡುಪಿ: 60 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ಡಾ| ಟಿಎಂಎ ಪೈ ಆಸ್ಪತ್ರೆಯು ಸೆಂಟರ್‌ ಫಾರ್‌ ಸ್ಟಡೀಸ್‌ ಆನ್‌ ಹೆಲ್ದಿ ಏಜಿಂಗ್‌ ಮತ್ತು ಮಣಿಪಾಲ ಕಾಲೇಜ್‌ ಆಫ್‌ ಹೆಲ್ತ್ ಪ್ರೊಫೆಶನ್ಸ್‌ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಶಿಬಿರವನ್ನು ಮಾ.21, 22ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12 ರವರೆಗೆ ಡಾ| ಟಿಎಂಎ ಪೈ ಆಸ್ಪತ್ರೆಯ 3 ನೇ ಮಹಡಿಯಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಶಿಬಿರದಲ್ಲಿ ದೃಷ್ಟಿ ಮತ್ತು ಶ್ರವಣ ಪರೀಕ್ಷೆಗಳು, ಸ್ಮರಣಶಕ್ತಿ ಮತ್ತು ಮಾನಸಿಕ ಆರೋಗ್ಯ ಮೌಲ್ಯಮಾಪನಗಳು, ಸಮತೋಲನ ಮತ್ತು ಬೀಳುವ ಅಪಾಯದ ಮೌಲ್ಯಮಾಪನಗಳು, ಮಧುಮೇಹ ಪಾದ ತಪಾಸಣೆ ಮತ್ತು ಕ್ರಿಯಾತ್ಮಕ ಸಾಮರ್ಥ್ಯದ ಮೌಲ್ಯಮಾಪನ್ನು ಒಳಗೊಂಡಿರುತ್ತದೆ ಎಂದು ಡಾ| ಟಿಎಂಎ ಪೈ ಆಸ್ಪತ್ರೆಯ ವೈದ್ಯಕೀಯ ಅಧಿಧೀಕ್ಷಕ ಡಾ| ಶಶಿಕಿರಣ್‌ ಉಮಾಕಾಂತ್‌, ಮಣಿಪಾಲ ಕಾಲೇಜ್‌ ಆಫ್‌ ಹೆಲ್ತ್ ಪ್ರೊಫೆಶನ್ಸ್‌ನ ಡೀನ್‌ ಡಾ| ಜಿ. ಅರುಣ್‌ ಮಯ್ಯ ಮತ್ತು ಸೆಂಟರ್‌ ಫಾರ್‌ ಸ್ಟಡೀಸ್‌ ಆನ್‌ ಹೆಲ್ದಿ ಏಜಿಂಗ್‌ನ ಸಂಯೋಜಕಿ ಡಾ| ಸೆಬೆಸ್ಟಿನಾ ಅನಿತಾ ಡಿ’ಸೋಜಾ ಅವರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!