Saturday, June 13, 2026
Homeಕರಾವಳಿಮಂಗಳೂರು: ಲ್ಯಾಂಡ್ ಲಿಂಕ್ಸ್ ಎಲೈಟ್ ಅಪಾರ್ಟ್‌ಮೆಂಟ್‌ನಲ್ಲಿ ಉಚಿತ ಕೋವಿಡ್ ಲಸಿಕೆ ಶಿಬಿರ!

ಮಂಗಳೂರು: ಲ್ಯಾಂಡ್ ಲಿಂಕ್ಸ್ ಎಲೈಟ್ ಅಪಾರ್ಟ್‌ಮೆಂಟ್‌ನಲ್ಲಿ ಉಚಿತ ಕೋವಿಡ್ ಲಸಿಕೆ ಶಿಬಿರ!

- Advertisement -
- Advertisement -

ಮಂಗಳೂರು: ಉಚಿತ ಕೋವಿಡ್ ಲಸಿಕೆ ಶಿಬಿರವು ಇಂದು ಮೇರಿಹಿಲ್‌ನಲ್ಲಿರುವ ಲ್ಯಾಂಡ್ ಲಿಂಕ್ಸ್ ಎಲೈಟ್ ಅಪಾರ್ಟ್‌ಮೆಂಟ್‌ನಲ್ಲಿ ನಡೆಯಿತು.

ಲ್ಯಾಂಡ್ ಲಿಂಕ್ಸ್ ಎಲೈಟ್ ಅಪಾರ್ಟ್‌ಮೆಂಟ್ ಮಾಲೀಕರ ಸಂಘ ಮತ್ತು ಕುಂಜತಬೈಲ್ ನಗರ ಪಿಎಚ್‌ಸಿ ವತಿಯಿಂದ ಶಿಬಿರ ಆಯೋಜಿಸಲಾಗಿತ್ತು. ಇದು ಉಚಿತ ಶಿಬಿರವಾಗಿರುವುದರಿಂದ ಇಲ್ಲಿನ ನಿವಾಸಿಗಳಿಗೆ ತುಂಬಾ ಸಹಾಯವಾಗಿದ್ದು, ವಯಸ್ಸಾದ ಸದಸ್ಯರು ಮತ್ತು ಸಿಬ್ಬಂದಿಗಳಿಗೆ ಸಹಾಯ ಈ ಉಪಯೋಗವಾಗಿದೆ ಎಂದು ಸಂಘದ ಅಧ್ಯಕ್ಷ ಚಂದ್ರಪ್ರಕಾಶ್ ಹೇಳಿದರು.

ಇನ್ನು ಲಸಿಕೆ ಅಭಿಯಾನ ನಡೆಸಲು ನಮ್ಮ ಮನವಿಯನ್ನು ಸ್ವೀಕರಿಸಿದ ಕುಂಜತ್ಬೈಲ್ ಸಾರ್ವಜನಿಕ ಆರೋಗ್ಯ ಕೇಂದ್ರದಿಂದ ಉತ್ತಮ ಸಹಾಯವಾಗಿದೆ ಎಂದು ಅವರು ಹೇಳಿದರು.

ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಉಮೇಶ್ ಶೆಣೈ, ವ್ಯವಸ್ಥಾಪಕ ಪ್ರಣಮ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

- Advertisement -

Latest News

error: Content is protected !!