Thursday, June 4, 2026
Homeಇತರಉಪ್ಪಿನಂಗಡಿ: ರಿಪೇರಿ ಮಾಡಲು ಕೊಟ್ಟ ಆಭರಣವನ್ನು ವಾಪಸ್ ನೀಡದೆ ವಂಚನೆ...!

ಉಪ್ಪಿನಂಗಡಿ: ರಿಪೇರಿ ಮಾಡಲು ಕೊಟ್ಟ ಆಭರಣವನ್ನು ವಾಪಸ್ ನೀಡದೆ ವಂಚನೆ…!

- Advertisement -
- Advertisement -

ರಿಪೇರಿ ಮಾಡಲು ಕೊಟ್ಟ ಆಭರಣವನ್ನು ವಾಪಸ್ ನೀಡದೆ ವಂಚನೆ ಮಾಡಿದ ಘಟನೆ ಉಪ್ಪಿನಂಗಡಿಯ ಸ್ವರ್ಣ ಜುವೆಲ್ಲರಿಯಲ್ಲಿ ನಡೆದಿದೆ.

ಈ ಬಗ್ಗೆ, ಬಾರ್ಯ ಗ್ರಾಮದ ಮಹಿಳೆಯೊಬ್ಬರು ಸ್ವರ್ಣ ಆಭರಣ ಮಳಿಗೆಯ ಮಾಲಕನ ವಿರುದ್ಧ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ. ದುರಸ್ತಿಗೆ ನೀಡಿದ ಆಭರಣಗಳನ್ನು ಮರು ಹಿಂದಿರುಗಿಸಲು ನಿರಾಕರಣೆ ಮಾಡಿರುವುದರ ಬಗ್ಗೆ ದೂರು ದಾಖಲಾಗಿದೆ.

ಮಹಿಳೆಯ ತವರು ಮನೆಯವರು ಸುಮಾರು ಏಳು ವರ್ಷದ ಹಿಂದೆ ಸ್ವರ್ಣ ಅಂಗಡಿಯಿಂದ ಆಭರಣ ಖರೀದಿಸಿದ್ದರು. ಆ ಸಮಯದಲ್ಲಿ ತವರು ಮನೆಯವರು ಹಣವನ್ನು ಪಾವತಿ ಮಾಡಿರುತ್ತಾರೆ. ನನಗೂ ಆವರಣದ ಅಂಗಡಿಯವರಿಗೂ ಇಲ್ಲಿಯವರೆಗೂ ಯಾವುದೇ ವ್ಯವಹಾರಗಳಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇನ್ನು ಸರಿಪಡಿಸಲು ಆಭರಣವನ್ನು ಹಿಂಪಡೆಯಲು ಹೋಗಿದ್ದಾಗ ಹಿಂಪಡೆಯಲು ಮಹಿಳೆ ತೆರಳಿದ್ದರು. ಆ ಸಂದರ್ಭದಲ್ಲಿ ಬೆಳಗ್ಗಿನಿಂದ ಸಂಜೆಯ ವರೆಗೆ ಆಭರಣ ನೀಡುತ್ತೇನೆ ಎಂದು ಆಭರಣ ಅಂಗಡಿಯ ಮಾಲಕ ಸತಾಯಿಸಿದ್ದ ಎನ್ನಲಾಗಿದೆ. ಸಂಜೆ 7.00 ಗಂಟೆ ಸುಮಾರಿಗೆ ನಿಮ್ಮ ಆಭರಣವನ್ನು ಕೊಡಲು ಆಗುವುದಿಲ್ಲ, ನಿನ್ನ ಅಣ್ಣ ನನಗೆ ಹಣ ಕೊಡಬೇಕು ಎಂದು ಅಂಗಡಿ ಮಾಲಿಕ ವಿಚಿತ್ರವಾಗಿ ಹೇಳಿದ್ದಾರೆ. ಎನ್ನಲಾಗಿದೆ. ಆಭರಣವನ್ನು ಕೊಡುವುದಿಲ್ಲ ಎಂದು ಗದರಿಸಿದ್ದಾರೆ. ಇದೀಗ ಈ ಸಮಸ್ಯೆ ನನ್ನನ್ನು ನನ್ನ ಗಂಡನ ಮನೆಗೆ ತೆರಳದಂತೆ ತಡೆಯಾಗಿರುತ್ತದೆ ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!