Monday, May 6, 2024
Homeಕರಾವಳಿಎಸ್.ಡಿ.ಪಿ.ಐ ಸುಳ್ಯ ವಿಧಾನಸಭಾ ಕ್ಷೇತ್ರ, ನಗರ ಸಮಿತಿ ಮತ್ತು ಮೂರು ಬ್ಲಾಕ್ ಸಮಿತಿಗಳ ನೂತನ...

ಎಸ್.ಡಿ.ಪಿ.ಐ ಸುಳ್ಯ ವಿಧಾನಸಭಾ ಕ್ಷೇತ್ರ, ನಗರ ಸಮಿತಿ ಮತ್ತು ಮೂರು ಬ್ಲಾಕ್ ಸಮಿತಿಗಳ ನೂತನ ಪದಾಧಿಕಾರಿಗಳ ಆಯ್ಕೆ!

spot_img
- Advertisement -
- Advertisement -

ಸುಳ್ಯ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಸುಳ್ಯ ವಿಧಾನಸಭಾ ಕ್ಷೇತ್ರ,ನಗರ ಹಾಗೂ ಮೂರು ಬ್ಲಾಕ್ ಸಮಿತಿಗಳ 2021-2014 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ಸುಳ್ಯ ಪರಿವಾರಕಾನದ ಗ್ರಾಂಡ್ ಪರಿವಾರ್ ಹಾಲ್ ನಲ್ಲಿ ನಡೆಯಿತು.

ವಿಧಾನಸಭಾ ಕ್ಷೇತ್ರ ಸಮಿತಿಯ ನೂತನ ಅಧ್ಯಕ್ಷರಾಗಿ ಇಕ್ಬಾಲ್ ಬೆಳ್ಳಾರೆ,ಉಪಾಧ್ಯಕ್ಷರಾಗಿ ಬಾಬು ಎನ್.ಸವಣೂರು,ಕಾರ್ಯದರ್ಶಿಯಾಗಿ ನಝೀರ್ ಸಿ.ಎ, ಜೊತೆ ಕಾರ್ಯದರ್ಶಿ ಯಾಗಿ ಉವೈಸ್ ಸಂಪಾಜೆ ಕೋಶಾಧಿಕಾರಿಯಾಗಿ ಹಾಜಿ ಮಮ್ಮಾಲಿ ಬೆಳ್ಳಾರೆ ಹಾಗೂ ಸಮಿತಿ ಸದಸ್ಯರಾಗಿ ಸಿದ್ದೀಕ್ ಅಲೆಕ್ಕಾಡಿ, ಅಶ್ರಫ್ ಟರ್ಲಿ, ಅಬ್ದುಲ್ ಕಲಾಂ ಸುಳ್ಯ,ಸಿದ್ದೀಕ್ ಕೊಡಿಯೆಮ್ಮೆಆಯ್ಕೆಯಾದರು.

ಸುಳ್ಯ ನಗರ ಸಮಿತಿಯ ಅಧ್ಯಕ್ಷರಾಗಿ ಅಥಾವುಲ್ಲ ಸುಳ್ಯ ,ಕಾರ್ಯದರ್ಶಿಯಾಗಿ ಮಿರಾಝ್ ಸುಳ್ಯ ಆಯ್ಕೆ ಯಾಗಿದ್ದಾರೆ.

ಸುಳ್ಯ ಬ್ಲಾಕ್ ಅಧ್ಯಕ್ಷರಾಗಿ ಆಬೀದ್ ಪೈಚಾರು, ಕಾರ್ಯದರ್ಶಿಯಾಗಿ ಫಾರೂಕ್ ಕಲ್ಲುಗುಂಡಿ, ಬೆಳ್ಳಾರೆ ಬ್ಲಾಕ್ ಅಧ್ಯಕ್ಷರಾಗಿ ಹಮೀದ್ ಮರಕ್ಕಡ ಕಾರ್ಯದರ್ಶಿಯಾಗಿ ಶಹೀದ್ ಬೆಳ್ಳಾರೆ, ಸವಣೂರು ಬ್ಲಾಕ್ ಅಧ್ಯಕ್ಷರಾಗಿ ರಫೀಕ್ ಎಂ.ಎ,ಕಾರ್ಯದರ್ಶಿಯಾಗಿ ಅಶ್ರಫ್ ಉರ್ಸಾಗ್ ಆಯ್ಕೆಯಾಗಿದ್ದಾರೆ

ಎಸ್ ಡಿಪಿಐ ದ.ಕ ಜಿಲ್ಲಾ ಸಮಿತಿ ಕಾರ್ಯದರ್ಶಿ ಗಳಾದ ಅನ್ವರ್ ಸಾದಾತ್ ಹಾಗೂ ಜಮಾಲ್ ಜೋಕಟ್ಟೆ, ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಕೋಶಾಧಿಕಾರಿಗಳಾದ ಅಶ್ರಫ್ ಬಾವು ಆಂತರಿಕ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ನಿರ್ಗಮಿತ ಅಧ್ಯಕ್ಷ ಅಬ್ದುಲ್ ಕಲಾಂ ಸುಳ್ಯ ಮಾತನಾಡಿ ಕಳೆದ ಮೂರು ವರ್ಷಗಳಲ್ಲಿ ಪಕ್ಷದ ಹೋರಾಟದ ಫಲವಾಗಿ ಜನರ ಬಳಿಗೆ ಮುಟ್ಟಲು ಸಾಧ್ಯವಾಗಿದೆ,ಹಾಗೂ ಮುಂದಿನ ದಿನಗಳಲ್ಲಿ ತಾಲೂಕಿನ ಪ್ರತಿಯೊಂದು ಹಳ್ಲಿ ಹಳ್ಳಿ ಗಳಿಗೆ ನಮ್ಮ ಪಕ್ಷವು ಮುಟ್ಟುವಂತಾಗಬೇಕು. ಆ ಮೂಲಕ ಪಕ್ಷವನ್ನು ಇನ್ನಷ್ಟು ಬಲಿಷ್ಠ ಗೊಳಿಸಬೇಕೆಂದು ಹೇಳಿದರು.

ನಿರ್ಗಮಿತ ಕಾರ್ಯದರ್ಶಿ ಮುಸ್ತಫಾ ಎಂ.ಕೆ ಕಳೆದ ಸಾಲಿನಲ್ಲಿ ನಡೆದ ಪಕ್ಷದ ಕಾರ್ಯಚಟುವಟಿಕೆಗಳ ವರದಿಯನ್ನು ವಾಚಿಸಿದರು.

ನೂತನ ಸಮಿತಿಯ ಅಧ್ಯಕ್ಷರಾದ ಇಕ್ಬಾಲ್ ಬೆಳ್ಳಾರೆ ಮಾತನಾಡಿ ಮುಂದಿನ ದಿನಗಳಲ್ಲಿ ಪಕ್ಷವನ್ನು ಸ್ಪಷ್ಟ ಜಾತ್ಯತೀತ ತಳಹದಿಯೊಂದಿಗೆ ಮುನ್ನಡೆಸಬೇಕು ಹಾಗೂ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಪಕ್ಷದ ಸಿದ್ದಾಂತವನ್ನು ಯಾವ ರೀತಿ ಜನ ಸಾಮಾನ್ಯರ ಬಳಿ ಮುಟ್ಟಿಸಬೇಕೆಂದು ವಿವರಿಸಿದರು. ಮತ್ತು ಅಲ್ಪಸಂಖ್ಯಾತ ದಲಿತ ಹಿಂದುಳಿದ ವರ್ಗಗಳ ಮತ್ತು ಸೋಶಿತ ಸಮುದಾಯದ ನ್ಯಾಯಕ್ಕಾಗಿ ಹೋರಾಡಿ ಅವರ ನ್ಯಾಯದ ಧ್ವನಿಯಾಗಬೇಕೆಂದು ಕರೆ ನೀಡಿದರು.

ಸಮಾರೋಪ ಭಾಷಣದಲ್ಲಿ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಮಾತನಾಡಿ ಪ್ರಸಕ್ತ ಸಾಲಿನಲ್ಲಿ ಪಕ್ಷದ ಜವಾಬ್ದಾರಿ ಮತ್ತು ಕಾರ್ಯಕರ್ತರ ಹೊಣೆಗಾರಿಕೆಯನ್ನು ವಿವರಿಸಿದರು.ಸಭೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ವ್ಯಾಪ್ತಿಯ ಗ್ರಾಮ ಸಮಿತಿ ಮತ್ತು ಬೂತ್ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.

- Advertisement -
spot_img

Latest News

error: Content is protected !!