Monday, May 13, 2024
HomeUncategorizedಉಡುಪಿ: ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯಿಸಿಕೊಂಡು ಲಕ್ಷಾಂತರ ರೂಪಾಯಿ ವಂಚನೆ !

ಉಡುಪಿ: ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯಿಸಿಕೊಂಡು ಲಕ್ಷಾಂತರ ರೂಪಾಯಿ ವಂಚನೆ !

spot_img
- Advertisement -
- Advertisement -

ಉಡುಪಿ: ವ್ಯಕ್ತಿಯೊಬ್ಬರನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯಿಸಿಕೊಂಡು ಲಕ್ಷಾಂತರ ರೂ . ವಂಚಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ವಂಚನೆಗೆ ಒಳಗಾದ ವ್ಯಕ್ತಿ ಗುಂಡಿಬೈಲಿನ ಕಲ್ಸಂಕ ನಿವಾಸಿ ಕೊಟ್ಟಿಲ್ಲಾ ಡಿ’ಕೊಸ್ತಾ . ಇವರು ಪೊಲೀಸರಿಗೆ ದೂರು ನೀಡಿದ್ದು , ಅದರಂತೆ ಕೊಟೆಲ್ಲಾ ಡಿ’ಕೊಸ್ತಾ ಅವರು ತಮ್ಮ ಮಕ್ಕಳೊಂದಿಗೆ ದುಬೈನಲ್ಲಿ ವಾಸ ಮಾಡಿಕೊಂಡಿದ್ದಾರೆ .

ಫಿಲಿಪ್ ಜೇಮ್ಸ್ ಎಂಬಾತ ಇವರಿಗೆ ಆ್ಯಪ್ ಮುಖೇನ ಪರಿಚಯವಾಗಿದ್ದು , ತಾನು ರೊಮಾನಿಯ ದೇಶದವನಾಗಿದ್ದು , ಯು.ಕೆ ದೇಶದಲ್ಲಿ ವೈದ್ಯಕೀಯ ವ್ಯಕ್ತಿ ಮಾಡಿಕೊಂಡಿರುವುದಾಗಿ ತಿಳಿಸಿದ್ದ. ಅಲ್ಲದೆ ಇವರೊಂದಿಗೆ ಮೆಸೇಜ್ ಮತ್ತು ವಾಟ್ಸಪ್ ಕರೆ ಮಾಡಿ ಮಾತನಾಡುತ್ತಿದ್ದ.

ದೂರುದಾರರು ದುಬೈನಿಂದ ಊರಿಗೆ ಬಂದಿದ್ದರು. ಆಪಾದಿತನು ತಾನು ದೆಹಲಿ ಏರ್‌ಪೋರ್ಟ್‌ನಲ್ಲಿದ್ದು , ತನ್ನನ್ನು ಕಸ್ಟಮ್‌ನವರು ಹಿಡಿದಿಟ್ಟಿದ್ದು , ಡಾಲರ್‌ನ್ನು ಇಂಡಿಯನ್ ಕರೆನ್ಸಿಗೆ ಬದಲಾಯಿಸಲು ಆಗುವುದಿಲ್ಲ ಎಂದು ಹೇಳಿ ದೂರುದಾರರನ್ನು ನಂಬಿಸಿದ್ದನು.

ಹಂತಹಂತವಾಗಿ ಒಟ್ಟು 13,70,042 ರೂ . ಹಣವನ್ನು ಲೆಮಿಂಗ್ ಹುಂಗೋ ( Lemring Hungyo ) ಮತ್ತು ಹಿಜಾಮ್ ತಾಜ ಮಂಬಿ ದೇವಿ ( Hijam Thaja Manbi Devi ) ಎಂಬವರ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ . ಆದರೆ ಆ ಬಳಿಕ ದೂರುದಾರರ ಯಾವುದೇ ಕರೆಗಳನ್ನು ಸ್ವೀಕರಿಸದೇ ದೂರುದಾರರಿಗೆ ವಂಚಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ ಈ ಬಗ್ಗೆ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

- Advertisement -
spot_img

Latest News

error: Content is protected !!