Thursday, June 4, 2026
Homeಕರಾವಳಿಉಡುಪಿಕುಂದಾಪುರ: ಲೈಂಗಿಕ ಕಿರುಕುಳ, ಅಪ್ರಾಪ್ತೆ ಗರ್ಭಿಣಿ, ಪೋಕ್ಸೋ ಅಡಿಯಲ್ಲಿ ವ್ಯಕ್ತಿ ಬಂಧನ !

ಕುಂದಾಪುರ: ಲೈಂಗಿಕ ಕಿರುಕುಳ, ಅಪ್ರಾಪ್ತೆ ಗರ್ಭಿಣಿ, ಪೋಕ್ಸೋ ಅಡಿಯಲ್ಲಿ ವ್ಯಕ್ತಿ ಬಂಧನ !

- Advertisement -
- Advertisement -

ಕುಂದಾಪುರ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಗರ್ಭ ಧರಿಸಿದ ವ್ಯಕ್ತಿಯನ್ನು ಪೋಕ್ಸೋ ಅಡಿಯಲ್ಲಿ ಬಂಧಿಸಲಾಗಿದೆ.

ಯಡಮೊಗೆ ಗ್ರಾಮದ ಮಧುವನ ನಿವಾಸಿ ಶ್ರೀಕಾಂತ (23) ಎಂಬಾತನೇ ಪೊಲೀಸರ ವಶಕ್ಕೆ ಪಡೆದಿರುವ ವ್ಯಕ್ತಿ. ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಆರೋಪಿ ನಿರಂತರವಾಗಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದು, ರಾತ್ರಿ ವೇಳೆ ಆಕೆಯ ಮೇಲೆ ಅತ್ಯಾಚಾರ ಎಸಗುತ್ತಿದ್ದ. ನಂತರ ಗರ್ಭಿಣಿಯಾದಳು.

ಬಾಲಕಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ತಾಲೂಕಿನ ಸರಕಾರಿ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಂಡಿದ್ದಾಳೆ. ಆಸ್ಪತ್ರೆಯ ವೈದ್ಯರು ಆಕೆ ಗರ್ಭಿಣಿ ಎಂದು ಖಚಿತಪಡಿಸಿದ್ದಾರೆ.

ಶಂಕರನಾರಾಯಣ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!