Wednesday, June 3, 2026
Homeಕರಾವಳಿಉಡುಪಿಬ್ರಹ್ಮಾವರ: ಬ್ಯಾಂಕಿಗೆ ಲಕ್ಷಾಂತರ ರೂಪಾಯಿ ವಂಚನೆ !

ಬ್ರಹ್ಮಾವರ: ಬ್ಯಾಂಕಿಗೆ ಲಕ್ಷಾಂತರ ರೂಪಾಯಿ ವಂಚನೆ !

- Advertisement -
- Advertisement -

ಬ್ರಹ್ಮಾವರ: ಬ್ಯಾಂಕಿನಲ್ಲಿ ಮಾಡಿದ್ದ ಸಾಲ ತೀರಿಸದೆ ಭದ್ರತೆಗಾಗಿ ಇಟ್ಟಿದ್ದ ವಸ್ತುಗಳನ್ನು ಇತರೆಡೆಗೆ ಮಾಡಿ ಬ್ಯಾಂಕಿಗೆ ವಂಚನೆ ಮಾಡಿರುವ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಾಗಿದೆ .

ಸಂತೋಷ್ ಕೋಟ್ಯಾನ್ , ಮಂಜುಳ ಎಸ್.ಕೋಟ್ಯಾನ್ ಇವರು ಭಾರತ್ ಕೋ ಆಪರೇಟಿವ್ ಬ್ಯಾಂಕ್ ಇದರ ಉಡುಪಿ ಬ್ರಾಂಚ್ ನಲ್ಲಿ ವ್ಯಾಪಾರದ ಉದ್ದೇಶದಿಂದ 2,89,29,120 ರೂ . ಸಾಲ ಪಡೆದಿದ್ದರು . ಅಲ್ಲದೆ ಸಾಲದ ಭದ್ರತೆಗಾಗಿ ಫ್ಯಾಕ್ಟರಿಯ ಚರ ಆಸ್ಥಿಯನ್ನು ಬ್ಯಾಂಕಿನವರಿಗೆ ಕರಾರು ಪತ್ರದ ಮೂಲಕ ಅಡಮಾನ ಇರಿಸಿ , ಫ್ಯಾಕ್ಟರಿಯ ಚರ ಆಸ್ತಿಯ ಮೇಲೆ ಬ್ಯಾಂಕಿನವರಿಗೆ ಜನರಲ್ ಪವರ್ ಆಫ್ ಅಟಾರ್ನಿ ಮಾಡಿಕೊಟ್ಟಿದ್ದರು .

ಆದರೆ ನಂತರ ಆರೋಪಿತರು ಬ್ಯಾಂಕಿನಿಂದ ಪಡೆದ ಸಾಲದ ಮೊತ್ತಕ್ಕೆ ಸರಿಯಾಗಿ ಸಾಲದ ಕಂತಿನ ಹಣವನ್ನು ಪಾವತಿ ಮಾಡದೇ , ಸಾಲದ ಅಡಮಾನ ಇರಿಸಿದ್ದ ಫ್ಯಾಕ್ಟರಿಯಲ್ಲಿದ್ದ ಮೆಷಿನರಿ ವಸ್ತುಗಳು ಮತ್ತು ಇತರೇ ವಸ್ತುಗಳನ್ನು ಬ್ಯಾಂಕಿಗೆ ಹಿಂದಿರುಗಿಸದೆ ಇತರೆಡೆಗೆ ಸಾಗಾಟ ಮಾಡಿ ಬ್ಯಾಂಕಿಗೆ ವಂಚಿಸಿರುವುದಾಗಿ ಪೊಲೀಸರಿಗೆ ಈ ಬಗ್ಗೆ ಭಾರತ್ ಕೋ ಆಪರೇಟಿವ್ ಬ್ಯಾಂಕ್ ( ಮುಂಬೈ ) ಲಿಮಿಟೆಡ್ , ಉಡುಪಿ ಬ್ರಾಂಚ್ ನ ಡೆಪ್ಯುಟಿ ಜನರಲ್ ಮೆನೇಜರ್ ಹಾಗೂ ಆಥೋರೈಸಡ್ ಆಫಿಸರ್ ಬಾಲಕೃಷ್ಣ ಕರ್ಕೆರಾ ಅವರು ಪೊಲೀಸರಿಗೆ ದೂರು ನೀಡಿದ್ದು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!