Friday, May 17, 2024
Homeಕರಾವಳಿಉಡುಪಿಕುಂದಾಪುರ: ಪ್ರಖ್ಯಾತ ಯಕ್ಷಗಾನ ಸ್ತ್ರೀ ವೇಷಧಾರಿ ಮಾರ್ಗೋಳಿ ಗೋವಿಂದ ಶೇರಿಗಾರ್‌ ಇನ್ನಿಲ್ಲ

ಕುಂದಾಪುರ: ಪ್ರಖ್ಯಾತ ಯಕ್ಷಗಾನ ಸ್ತ್ರೀ ವೇಷಧಾರಿ ಮಾರ್ಗೋಳಿ ಗೋವಿಂದ ಶೇರಿಗಾರ್‌ ಇನ್ನಿಲ್ಲ

spot_img
- Advertisement -
- Advertisement -

ಕುಂದಾಪುರ: ಯಕ್ಷಗಾನದಲ್ಲಿ ಸ್ತ್ರೀ ವೇಷಧಾರಿ ಪಾತ್ರ ಮಾಡುತ್ತಿದ್ದ ಮಾರ್ಗೋಳಿ ಗೋವಿಂದ ಶೇರಿಗಾರ್‌(96) ನಿಧನ ಹೊಂದಿದರು. ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಯಕ್ಷಗಾನ ಕಲಾರಂಗ ಗಾಢ ಸಂತಾಪ ವ್ಯಕ್ತಪಡಿಸಿದೆ. ಇಂದು ಬೆಳಗ್ಗೆ 10.30ಕ್ಕೆ ಅಂತ್ಯಕ್ರಿಯೆ ನಡೆಯಲಿದೆ.

ಕುಂದಾಪುರ ನಗರದಿಂದ ಬಸ್ರೂರಿನ ಮಾರ್ಗ ಮಧ್ಯದಲ್ಲಿ ಬರುವ ಮಾರ್ಗೋಳಿ ಎನ್ನುವ ಪುಟ್ಟ ಗ್ರಾಮದ ನರಸಿಂಹ ಶೇರುಗಾರ ಹಾಗೂ ಸುಬ್ಬಮ್ಮ ದಂಪತಿಗಳ ಕುಟುಂಬದಲ್ಲಿ ಜನಿಸಿದ್ದರು. ಯಕ್ಷಗಾನ ಕಲೆಯ ಮೇಲಿರುವ ಅಪರಿಮಿತ ಆಸಕ್ತಿಯಿಂದಾಗಿ 13 ನೇ ವಯಸ್ಸಿನಲ್ಲಿಯೇ ಬಡಗುತಿಟ್ಟು ಹೆಸರಾಂತ ಮೇಳಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಮಂದಾರ್ತಿ ಮೇಳವನ್ನು ಸೇರಿದ್ದರು. ಪಾರಂಪರಿಕ ಯಕ್ಷಗಾನ ಗುರುಗಳಾದ ವೀರಭಧ್ರ ನಾಯಕ್, ಕೊಕ್ಕರ್ಣೆ ಗುಂಡು ನಾಯಕ್, ನರಸಿಂಹ ಕಮ್ತಿ ಮುಂತಾದ ಹಿರಿಯ ಕಲಾವಿದರ ಗರಡಿಯಲ್ಲಿ ಪರಿಣಿತಿ ಹೊಂದಿ ಅತ್ಯಲ್ಪ ಕಾಲದಲ್ಲಿಯೇ ಬಡಗುತಿಟ್ಟಿನ ಪ್ರಮುಖ ಸ್ತ್ರೀ ವೇಷಧಾರಿಯಾಗಿ ಗುರುತಿಸಿಕೊಂಡಿದ್ದರು.

ಬಡಗುತಿಟ್ಟಿನ ಪುರಾಣ ಪ್ರಸಂಗಗಳಲ್ಲಿ ಅತ್ಯಂತ ಪ್ರಸಿದ್ದವಾದ ಹಾಗೂ ಭಕ್ತಿಪೂರ್ಣವಾದ ಪ್ರಸಂಗ ಶ್ರೀ ದೇವಿ ಮಾಹಾತ್ಮೆ. ಈ ಪ್ರಸಂಗದ ಮೊದಲ ಪ್ರಯೋಗ ನಡೆದದ್ದು, ಶ್ರೀ ಕ್ಷೇತ್ರ ಮಂದಾರ್ತಿಯಲ್ಲಿ. ಈ ಮೊದಲ ಪ್ರದರ್ಶನದಲ್ಲಿ ಶ್ರೀ ದೇವಿಯಾಗಿ ಬಣ್ಣ ಹಚ್ಚಿದ್ದು ಮಾರ್ಗೋಳಿಯವರು.

ಯಕ್ಷರಂಗ ಸೇವೆಯಲ್ಲಿ ಅಂದಾಜು 38 ವರ್ಷಗಳ ಕಾಲ ಸ್ತ್ರೀ ವೇಷಧಾರಿಯಾಗಿ ರಂಗದ ಮೇಲೆ ಅಭಿನಯ ಶಾರದೆಯಾಗಿ ಮೆರೆದಿದ್ದ ಅವರು ಬಡಗುತಿಟ್ಟಿನ ಪ್ರಸಿದ್ದ ಮೇಳಗಳಾದ ಶ್ರೀ ಕ್ಷೇತ್ರ ಮಂದಾರ್ತಿ, ಶ್ರೀ ಕ್ಷೇತ್ರ ಮಾರಣಕಟ್ಟೆ, ಶ್ರೀ ಕ್ಷೇತ್ರ ಸೌಕೂರು, ಶ್ರೀ ಕ್ಷೇತ್ರ ಅಮೃತೇಶ್ವರಿ. ಶ್ರೀ ಕ್ಷೇತ್ರ ಇಡಗುಂಜಿ, ಶ್ರೀ ಕ್ಷೇತ್ರ ಕಮಲಶಿಲೆ ಮೇಳಗಳಲ್ಲಿ ಹಾಗೂ ವೃತ್ತಿ ಮೇಳಗಳಾದ ಪೆರ್ಡೂರು ಹಾಗೂ ಸಾಲಿಗ್ರಾಮ ಮೇಳಗಳಲ್ಲಿ ಬಣ್ಣದ ಸೇವೆಯನ್ನು ಮಾಡುವ ಮೂಲಕ ಸುಮಾರು 5 ದಶಕಗಳ ಕಾಲ ಯಕ್ಷಾಭಿಮಾನಿಗಳ ಹೃದಯ ಸಿಂಹಾಸನದ ಅನಭಿಶೇಕ್ತ ರಾಣಿಯಾಗಿದ್ದರು.

- Advertisement -
spot_img

Latest News

error: Content is protected !!