Saturday, June 6, 2026
Homeಅಪರಾಧಬೆಳ್ತಂಗಡಿ :ಆನ್ ಲೈನ್ ಶೇರು ವ್ಯವಹಾರದಲ್ಲಿ ಹಣ ಸಂಗ್ರಹಿಸಿ ವಂಚಿಸುತ್ತಿದ್ದ ಆರೋಪಿ ಬಂಧನ

ಬೆಳ್ತಂಗಡಿ :ಆನ್ ಲೈನ್ ಶೇರು ವ್ಯವಹಾರದಲ್ಲಿ ಹಣ ಸಂಗ್ರಹಿಸಿ ವಂಚಿಸುತ್ತಿದ್ದ ಆರೋಪಿ ಬಂಧನ

- Advertisement -
- Advertisement -

ಬೆಳ್ತಂಗಡಿ :  ಆನ್ ಲೈನ್ ಶೇರು ವ್ಯವಹಾರಕ್ಕೆಂದು ನಾನಾ ಜನರಿಂದ ಹಣ ಸಂಗ್ರಹಿಸಿ ವಂಚಿಸುತ್ತಿದ್ದ ಪ್ರಕಾರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಮೂಲದ ಹರ್ಮನ್ ಜಾಯ್ಸನ್ ಲೋಬೊ ಎಂಬುವವನನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ಆರೋಪಿ ಹರ್ಮನ್ ಜಾಯ್ಸನ್ ಲೋಬೊನನ್ನು ಅ.3ರಂದು ಹೊಸದಿಲ್ಲಿ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದರು. ಈತನ ವಿರುದ್ಧ ಮಂಗಳೂರು ಪೊಲೀಸರು ಈ ಹಿಂದೆ ಹೊರಡಿಸಿರುವ ಲುಕ್‌ ಔಟ್ ನೋಟೀಸ್‌ನಂತೆ ಆತನನ್ನು ತಮ್ಮ ವಶಕ್ಕೆ ಪಡೆದುಕೊಂಡು ಮಂಗಳೂರಿಗೆ ಕರೆ ತಂದಿದ್ದಾರೆ.

ಮೂರು ಡಿಮ್ಯಾಟ್ ಅಕೌಂಟ್‌ಗಳ ಮೂಲಕ ಆನ್‌ಲೈನ್ ಶೇರ್ ಟ್ರೇಡಿಂಗ್ ಮಾಡುತ್ತಿದ್ದ ಈತ, ಈತ 59 ಲ.ರೂ ಗಳಿಗಿಂತಲೂ ಹೆಚ್ಚು ಹಣ ಸಂಗ್ರಹಿಸಿ ಸುಮಾರು 30ಮಂದಿಗೆ ವಂಚಿಸಿರುವ ಮಾಹಿತಿ ಇದೆ ಎಂದು ಮಂಗಳೂರು ಪೊಲಿಸ್ ಅಯುಕ್ತರು ತಿಳಿಸಿದ್ದಾರೆ.

ಹಣ ದ್ವಿಗುಣಗೊಳಿಸುವ ಆಮಿಷ ನೀಡಿ ಈತ ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿಸಿ ಬ್ಯಾಂಕ್‌ ಗಿಂತ ಅಧಿಕ ಬಡ್ಡಿ ನೀಡುವುದಾಗಿಯೂ ಒಂದು ವರ್ಷದಲ್ಲಿ ಹಣ ದ್ವಿಗುಣಗೊಳಿಸಿ ಕೊಡುವುದಾಗಿಯೂ ಹೇಳುತ್ತಿದ್ದ. ಆರಂಭದಲ್ಲಿ ಸ್ವಲ್ಪ ಮೊತ್ತ ಹೂಡಿಕೆ ಮಾಡಿದವರೆಗೆ ಹೆಚ್ಚಿನ ಬಡ್ಡಿ ಸಹಿತವಾಗಿ ಹಣ ವಾಪಸ್ ನೀಡಿ ಅವರ ವಿಶ್ವಾಸ ಗಳಿಸುತ್ತಿದ್ದ. ಅವರು ಅದರಿಂದ ಉತ್ತೇಜಿತರಾಗಿ ಮತ್ತಷ್ಟು ಹಣ ಹೂಡಿಕೆ ಮಾಡಿದ ನಂತರ ವಂಚಿಸುತ್ತಿದ್ದ ಎಂದು ಆಯುಕ್ತರು ತಿಳಿಸಿದ್ದಾರೆ.

ವಂಚನೆ ಪ್ರಕರಣದಲ್ಲಿ ಈತನನ್ನು ಬಂಧಿಸಿದ ನಂತರವೂ ಓರ್ವರು ದೂರು ನೀಡಿದ್ದಾರೆ. ಈತನಿಂದ ಇದೇ ರೀತಿ ಇತರರಿಗೆ ವಂಚನೆಯಾಗಿದ್ದರೆ ಅವರು ಕೂಡ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಬಹುದಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

- Advertisement -

Latest News

error: Content is protected !!