Tuesday, May 7, 2024
Homeತಾಜಾ ಸುದ್ದಿBJP ಮುಖಂಡನ ಜೊತೆ ಇಸ್ಪೀಟ್‌ ಆಡ್ತಿದ್ದ ಪೋಲೀಸರ ಅಡ್ಡೆಗೆ ಪೊಲೀಸರಿಂದ ದಾಳಿ: ನಾಲ್ವರು ‌ಕಾನ್ಸ್‌ಟೇಬಲ್‌ಗಳ ಅಮಾನತು

BJP ಮುಖಂಡನ ಜೊತೆ ಇಸ್ಪೀಟ್‌ ಆಡ್ತಿದ್ದ ಪೋಲೀಸರ ಅಡ್ಡೆಗೆ ಪೊಲೀಸರಿಂದ ದಾಳಿ: ನಾಲ್ವರು ‌ಕಾನ್ಸ್‌ಟೇಬಲ್‌ಗಳ ಅಮಾನತು

spot_img
- Advertisement -
- Advertisement -

ಧಾರವಾಡ: ಜಿಲ್ಲೆಯ ವಿವಿಧ ಠಾಣೆಯ ಪೊಲೀಸ್ ಸಿಬ್ಬಂದಿಗಳು ಬಿಜೆಪಿ ಮುಖಂಡ ಅನಿಲ ಉಳವಣ್ಣವರ್ ಜೊತೆ ಸೇರಿ ಮುಮ್ಮಿಗಟ್ಟಿಯ ಹೋಟೆಲ್​ವೊಂದರ ಹಿಂಬದಿಯಲ್ಲಿ ಜೂಜಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ಪೀಟ್‌ ಆಡ್ತಿದ್ದ ನಾಲ್ವರು ‌ಕಾನ್ಸ್‌ಟೇಬಲ್‌ಗಳನ್ನ ಅಮಾನತುಗೊಳಿಸಿ ಧಾರವಾಡ ಎಸ್‌ಪಿ ಕೃಷ್ಣಕಾಂತ್‌ ಆದೇಶ ಹೊರಡಿಸಿದ್ದಾರೆ.

ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದಲ್ಲಿ ನವೆಂಬರ್ 11ಪೊಲೀಸ್ ಸಿಬ್ಬಂದಿ ಜೂಜಾಡುತ್ತಿದ್ದ ವೇಳೆ ಡಿವೈಎಸ್‌ಪಿ ರವಿ ನಾಯ್ಕ್‌ ನೇತೃತ್ವದಲ್ಲಿ ದಾಳಿ ನಡೆದಿತ್ತು. ಇಸ್ಪೀಟ್‌ ಆಡ್ತಿದ್ದ ಹತ್ತು ಪೊಲೀಸರು ಪರಾರಿಯಾಗಿದ್ದರು. ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸರು ಬಿಜೆಪಿ ಮುಖಂಡ ಅನಿಲ ಉಳವಣ್ಣವರ್​ನ ಬಂಧಿಸಿದ್ದು, ಜೊತೆಗೆ ಸ್ಥಳದಲ್ಲಿದ್ದ 35,050 ರೂಪಾಯಿ ನಗದು ಹಾಗೂ 5 ಬೈಕ್‌ಗಳನ್ನು ಸಹ ವಶಕ್ಕೆ ಪಡೆದಿದ್ದಾರೆ. ದಾಳಿಯಲ್ಲಿ ಸಿಕ್ಕ ಸಿಬ್ಬಂದಿಯೆಲ್ಲಾ ಗರಗ ಠಾಣೆ, ಧಾರವಾಡ ಗ್ರಾಮೀಣ ಠಾಣೆ ಹಾಗೂ DAR ಪಡೆಯ ಪೊಲೀಸರು ಎಂದು ಹೇಳಲಾಗಿದೆ.

ಸದ್ಯ ಈಗ ನಾಲ್ವರು ‌ಕಾನ್ಸ್‌ಟೇಬಲ್‌ಗಳನ್ನ ಅಮಾನತುಗೊಳಿಸಿ ಎಸ್‌ಪಿ ಕೃಷ್ಣಕಾಂತ್‌ ಆದೇಶ ಹೊರಡಿಸಿದ್ದಾರೆ.

- Advertisement -
spot_img

Latest News

error: Content is protected !!