- Advertisement -
- Advertisement -
ಚಿಕ್ಕಮಗಳೂರು: ಇಲ್ಲಿನ ಭದ್ರಾ ವನ್ಯಜೀವಿ ವಿಭಾಗದ ಹೆಬ್ಬೆ ವಲಯದ ತೇಗೂರುಗುಡ್ಡ ವ್ಯಾಪ್ತಿಯಲ್ಲಿ ಅರಣ್ಯ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಹುಲಿಯೊಂದರ ಕಳೇಬರ ಪತ್ತೆಯಾಗಿದೆ.ಸಾವಿಗೆ ನಿಖರವಾದ ಕಾರಣ ತಿಳಿದಿಲ್ಲ.
’ಹೆಣ್ಣು ಹುಲಿ ಕಳೇಬರ ಪತ್ತೆಯಾಗಿದ್ದು, 5ರಿಂದ 6 ವರ್ಷ ವಯಸ್ಸಿನ ಹುಲಿ ಇದಾಗಿದೆ. ಮೃತಪಟ್ಟು ಎರಡು ಮೂರು ದಿನಗಳಾಗಿವೆ ಎನ್ನಲಾಗಿದೆ. ಶಿವಮೊಗ್ಗದಿಂದ ವನ್ಯಜೀವಿ ವಿಭಾಗದ ಪಶುವೈದ್ಯ ಸ್ಥಳಕ್ಕೆ ಬಂದಿದ್ದು ಮರಣೋತ್ತರ ಪರೀಕ್ಷೆ ನಡೆಯಲಿದೆ’ ಎಂದು ವರದಿಯಾಗಿದೆ.
- Advertisement -