Saturday, June 6, 2026
Homeತಾಜಾ ಸುದ್ದಿಬಂಟ್ವಾಳ: ಹೆಜ್ಜೇನು ಕಡಿದು ಆಸ್ಪತ್ರೆಗೆ ದಾಖಲು- ರೋಗಿಗಳ ಆರೋಗ್ಯ ವಿಚಾರಿಸಿದ ಮಾಜಿ ಸಚಿವ ಬಿ.ರಮಾನಾಥ ರೈ

ಬಂಟ್ವಾಳ: ಹೆಜ್ಜೇನು ಕಡಿದು ಆಸ್ಪತ್ರೆಗೆ ದಾಖಲು- ರೋಗಿಗಳ ಆರೋಗ್ಯ ವಿಚಾರಿಸಿದ ಮಾಜಿ ಸಚಿವ ಬಿ.ರಮಾನಾಥ ರೈ

- Advertisement -
- Advertisement -

ಬಂಟ್ವಾಳ: ಹೆಜ್ಜೇನು ಕಡಿದು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ನಾಲ್ಕು ಮಂದಿಯ ಆರೋಗ್ಯವನ್ನು ಇಂದು ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿ ಮಾಜಿ ಸಚಿವ ಬಿ.ರಮಾನಾಥ ರೈ ವಿಚಾರಿಸಿದರು.

ಮೂಡು ಪಡುಕೋಡಿ ಗ್ರಾಮದ ಕಜೆಕೊಡಿ ಎಂಬಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಮೀಟಿಂಗ್ ಗಾಗಿ ತೆರಳುತ್ತಿದ್ದ ಹಾಗೂ ಇತರ ಗ್ರಾಮಸ್ಥರು ಸೇರಿದಂತೆ ಒಟ್ಟು ಒಂಬತ್ತು ಮಂದಿಗೆ ಜೇನುನೊಣ ಕಚ್ಚಿ ಗಾಯವಾಗಿತ್ತು ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅರುಣ ಶೆಟ್ಟಿ, ಶೀನ ಶೆಟ್ಟಿ ಐಯ್ತಪ್ಪ ಶೆಟ್ಟಿ,ಗಂಗಯ್ಯ ಗೌಡ ಇವರ ಆರೋಗ್ಯವನ್ನು ವಿಚಾರಿಸಲು ಮಾಜಿ ಸಚಿವರಾದ ಬಿ. ರಮಾನಾಥ ರೈ ಯವರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಬಂಟ್ವಾಳ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್,ನಿಕಟಪೂರ್ವ ಜಿಲ್ಲಾ ಪಂಚಾಯಿತಿ ಸದಸ್ಯರಾದ ಪದ್ಮಶೇಖರ್ ಜೈನ್,ಪುರಸಭಾ ಸದಸ್ಯರಾದ ವಾಸು ಪೂಜಾರಿ,ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಶಾಂತ ಜೈನ್,ಸುಧೀಂದ್ರ ಶೆಟ್ಟಿ,ಮತ್ತು ರಂಜಿತ್ ಪೂಜಾರಿ ಉಪಸ್ಥಿತರಿದ್ದರು.

- Advertisement -

Latest News

error: Content is protected !!