Wednesday, May 15, 2024
Homeಪ್ರಮುಖ-ಸುದ್ದಿಮೇಕೆದಾಟು ಪಾದಯಾತ್ರೆ ಡಿ.ಕೆ. ಶಿವಕುಮಾರ್ ಅವರಿಗೆ ವ್ಯಕ್ತಿತ್ವ ವಿಕಸನ ಶಿಬಿರವಾಗಿ ಪರಿಣಮಿಸಿದೆ: ಬಿಜೆಪಿ ಟೀಕೆ

ಮೇಕೆದಾಟು ಪಾದಯಾತ್ರೆ ಡಿ.ಕೆ. ಶಿವಕುಮಾರ್ ಅವರಿಗೆ ವ್ಯಕ್ತಿತ್ವ ವಿಕಸನ ಶಿಬಿರವಾಗಿ ಪರಿಣಮಿಸಿದೆ: ಬಿಜೆಪಿ ಟೀಕೆ

spot_img
- Advertisement -
- Advertisement -

ಬೆಂಗಳೂರು: ಮೇಕೆದಾಟು ಪಾದಯಾತ್ರೆ ಡಿ.ಕೆ. ಶಿವಕುಮಾರ್ ಅವರಿಗೆ ವ್ಯಕ್ತಿತ್ವ ವಿಕಸನ ಶಿಬಿರವಾಗಿದೆ ಎಂದು ಬಿಜೆಪಿ ಟೀಕೆ ಮಾಡಿದೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯ ಘಟಕ ಮೂವತ್ತು ದಿನದಲ್ಲಿ ಇಂಗ್ಲೀಷ್ ಕಲಿಯುವುದು ಹೇಗೆ? ಎಂಬಂತಹ ಪುಸ್ತಕಗಳ ರೀತಿಯಲ್ಲಿ “ಪಾದಯಾತ್ರೆ ಮೂಲಕ ನಾಯಕರಾಗಿ” ಎಂಬ ಪುಸ್ತಕ ಬರೆಯಬಹುದೇನೋ?, ಮೇಕೆದಾಟು ಪಾದಯಾತ್ರೆ ಎಂಬುದು ಈಗ ಡಿ.ಕೆ. ಶಿವಕುಮಾರ್ ಅವರಿಗೆ ವ್ಯಕ್ತಿತ್ವ ವಿಕಸನ ಶಿಬಿರವಾಗಿ ಪರಿಣಮಿಸಿದೆ ಎಂದು ಬಿಜೆಪಿ ಕುಹಕವಾಡಿದೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ವಿರುದ್ಧವೂ ಕಿಡಿಕಾರಿರುವ ಬಿಜೆಪಿ ಕಾವೇರಿ ನೀರಿನ ಪ್ರತಿ ಹನಿಯಲ್ಲೂ ಈ ಭಾಗದ ಜನರ ಹಕ್ಕಿದೆ. ಇದು ಚಲಾವಣೆಯಾಗಬೇಕು. ಆದರೆ ಬೆಂಗಳೂರಿನಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಇದಕ್ಕೆ ಅಡ್ಡಿಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಹೇಳಿದ್ದಾರೆ.ಒಂದು ರಾಜ್ಯದ ಉಸ್ತುವಾರಿಯಾದವರಿಗೆ ಕನಿಷ್ಠ ಮಾಹಿತಿ ಇಲ್ಲದಿರುವುದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದೆ.

ಸುರ್ಜೇವಾಲಾ ಅವರೇ, ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ ಸ್ಥಿತಿ “ಆಕಾಶ ನೋಡುವುದಕ್ಕೆ ನೂಕು ನುಗ್ಗಲು” ಎಂಬಂತಾಗಿದೆ ಎಂದು ಟೀಕಿಸಿದೆ.ನೀವು ಯಾರ ವಿರುದ್ಧ ಹೋರಾಟ ನಡೆಸಬೇಕೆಂಬುದನ್ನು ಮೊದಲು ನಿರ್ಧರಿಸಿ. ಆ ಮೇಲೆ ಪಾದಯಾತ್ರೆ ನಾಟಕ ಮುಂದುವರಿಸಿ ಎಂದು ಟೀಕಿಸಿದೆ.

- Advertisement -
spot_img

Latest News

error: Content is protected !!