Saturday, June 6, 2026
HomeUncategorizedಮನೆಯೊಂದರ ಬಾವಿಗೆ ಬಿದ್ದ ಚಿರತೆಯನ್ನು ರಕ್ಷಿಸಿದ ಅರಣ್ಯಾಧಿಕಾರಿಗಳು

ಮನೆಯೊಂದರ ಬಾವಿಗೆ ಬಿದ್ದ ಚಿರತೆಯನ್ನು ರಕ್ಷಿಸಿದ ಅರಣ್ಯಾಧಿಕಾರಿಗಳು

- Advertisement -
- Advertisement -

ಮೂಡುಬಿದಿರೆ: ತಾಲೂಕಿನ ಶಿರ್ತಾಡಿ ಗ್ರಾಮದ ಮಕ್ಕಿ ನಿವಾಸಿ ರಮೇಶ ಪೂಜಾರಿ ಎಂಬವರ ಮನೆಯೊಂದರ ಬಾವಿಗೆ ಚಿರತೆಯೊಂದು ಬಿದಿದ್ದು, ಚಿರತೆಯನ್ನು ಅರಣ್ಯಾಧಿಕಾರಿಗಳು ಮೇಲಕ್ಕೆತ್ತಿ ರಕ್ಷಿಸಿದ ಘಟನೆ ಎ.8ರ ಮಂಗಳವಾರ ಮಧ್ಯರಾತ್ರಿ ನಡೆದಿದೆ.

ಈ ಕಾರ್ಯಚರಣೆಯಲ್ಲಿ ಮೂಡುಬಿದಿರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶ್ರೀಧರ ಅವರ ನಿರ್ದೇಶನದಂತೆ, ಮೂಡುಬಿದಿರೆ ವಲಯ ಅರಣ್ಯಾಧಿಕಾರಿ  ಕಿರಣ್ ಕುಮಾರ್ ಜಿ. ಅವರ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಕಾವ್ಯ ಆರ್., ರಾಘವೇಂದ್ರ ಶೆಟ್ಟಿ, ಬಸಪ್ಪ ಹಲಗೇರ, ಗಸ್ತು ಅರಣ್ಯ ಪಾಲಕರಾದ ಧರ್ಮರಾಜ, ಮಂಜುನಾಥ ಮಳ್ಳಿ, ರಾಜೇಶ್ , ಚಂದ್ರಶೇಖರ್, ಅರಣ್ಯ ವೀಕ್ಷಕರಾದ ಜನಾರ್ಧನ, ರಂಜನ್, ವಾಹನ ಚಾಲಕ ಮಿಥುನ್ ಪಾಲ್ಗೊಂಡಿದ್ದರು.

- Advertisement -

Latest News

error: Content is protected !!