Sunday, April 28, 2024
Homeಚಿಕ್ಕಮಗಳೂರುಕುಮಾರ ಪರ್ವತದ ಚೆಕ್ ಪೋಸ್ಟ್ ಬಳಿ ಪ್ಲಾಸ್ಟಿಕ್ ಮತ್ತು ಬಾಟಲಿಗಳು ಬಿದ್ದಿರುವ ವೀಡಿಯೋ ವೈರಲ್: ಕ್ರಮಕ್ಕೆ...

ಕುಮಾರ ಪರ್ವತದ ಚೆಕ್ ಪೋಸ್ಟ್ ಬಳಿ ಪ್ಲಾಸ್ಟಿಕ್ ಮತ್ತು ಬಾಟಲಿಗಳು ಬಿದ್ದಿರುವ ವೀಡಿಯೋ ವೈರಲ್: ಕ್ರಮಕ್ಕೆ ಅರಣ್ಯ ಸಚಿವರ ಸೂಚನೆ

spot_img
- Advertisement -
- Advertisement -

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ದೇವರಗದ್ದೆಯ ಕುಮಾರ ಪರ್ವತ ಚಾರಣದ ಚೆಕ್ ಪೋಸ್ಟ್ ಬಳಿಯ ದೃಶ್ಯವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ವಾರಾಂತ್ಯದಲ್ಲಿ ಸಾವಿರಾರು ಜನರು ಟ್ರೆಕ್ಕಿಂಗ್ ಗೆ ಬಂದಿರುವ ಮತ್ತು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಗಳು ಮತ್ತು ಬಾಟಲಿಗಳು ಕಾಡಿನಂಚಿನ ರಸ್ತೆಯ ಎರಡೂ ಬದಿಯಲ್ಲಿ ಬಿದ್ದಿರುವ ದೃಶ್ಯದ ತುಣುಕು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ವೈರಲ್ ವಿಡಿಯೋದ ಸತ್ಯಾಸತ್ಯತೆ ತಿಳಿಯಲು ಮಡಿಕೇರಿಯ ಉಪ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಕೂಡಲೇ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಅರಣ್ಯ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ್ ಖಂಡ್ರೆ ಸೂಚಿಸಿದ್ದಾರೆ.

ಇನ್ನು ಮುಂದೆ ಹೀಗೆ ಜನ ಜಂಗುಳಿ ಆಗದಂತೆ ಮತ್ತು ಪರಿಸರ, ಅರಣ್ಯ ಉಳಿಸುವ ನಿಟ್ಟಿನಲ್ಲಿ ಚಾರಣಕ್ಕೆ ನಿಯಮಾನುಸಾರ ಸೂಕ್ತ ಕಡಿವಾಣ ಹಾಕಲಾಗುವುದು ಎಂದೂ ಸಚಿವ ಈಶ್ವರ ಖಂಡ್ರೆ ಮಾಧ್ಯಮ‌ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.

- Advertisement -
spot_img

Latest News

error: Content is protected !!