Thursday, June 4, 2026
Homeಕೊಡಗುಕೊಡಗು: ಅರಣ್ಯ ಇಲಾಖೆ ಸಿಬ್ಬಂದಿ ಅನುಮಾನಾಸ್ಪದ ಸಾವು

ಕೊಡಗು: ಅರಣ್ಯ ಇಲಾಖೆ ಸಿಬ್ಬಂದಿ ಅನುಮಾನಾಸ್ಪದ ಸಾವು

- Advertisement -
- Advertisement -

ಮಡಿಕೇರಿ: ಅರಣ್ಯ ಇಲಾಖೆ ಸಿಬ್ಬಂದಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಮತ್ತಿಗೋಡು ಆನೆ ಶಿಬಿರದ ಬಳಿ ಸಂಭವಿಸಿದೆ. ಇಪ್ಪತ್ತೇಳು ವರ್ಷದ ದಿಲೀಶ್, ಅರಣ್ಯ ಇಲಾಖೆಯಲ್ಲಿ ದಿನಗೂಲಿ‌ ನೌಕರನಾಗಿದ್ದರು.

ನೇಣು ಬಿಗಿದ ಸ್ಥಿತಿಯಲ್ಲಿ ದಿಲೀಶ್ ಶವ ಪತ್ತೆಯಾಗಿದ್ದು, ನೆಲದಲ್ಲಿ ಅಂಗಾತ ಬಿದ್ದ‌ ರೀತಿಯಲ್ಲಿ ಮೃತದೇಹ ಪತ್ತೆಯಾಗಿದೆ. ನೇಣಿಗೆ ಸಣ್ಣ ದಾರ ಬಳಸಲಾಗಿದೆ ಎಂದು ಹೇಳಲಾಗಿದ್ದು, ಹಲವು ರೀತಿಯ ಅನುಮಾನಗಳನ್ನು ದಿಲೀಶ್ ಸಾವು ಹುಟ್ಟು ಹಾಕಿದೆ.

ಗೋಣಿಕೊಪ್ಪಲು ಠಾಣೆ ಪೊಲೀಸರಿಂದ‌ ಅನುಮಾನಾಸ್ಪದ ಸಾವು ಪ್ರಕರಣ‌ ದಾಖಲಾಗಿದೆ.

- Advertisement -

Latest News

error: Content is protected !!