Thursday, June 4, 2026
Homeಕರಾವಳಿಉಡುಪಿಮಣಿಪಾಲದಲ್ಲಿ ಪಾದರಕ್ಷೆ ಮಳಿಗೆಯಲ್ಲಿ ಬೆಂಕಿ ಅನಾಹುತ

ಮಣಿಪಾಲದಲ್ಲಿ ಪಾದರಕ್ಷೆ ಮಳಿಗೆಯಲ್ಲಿ ಬೆಂಕಿ ಅನಾಹುತ

- Advertisement -
- Advertisement -

ಮಣಿಪಾಲ: ಇಲ್ಲಿನ ಲಕ್ಷ್ಮೀಂದ್ರ ನಗರ ಸಮೀಪದ ಕಟ್ಟಡವೊಂದರಲ್ಲಿರುವ ವುಡ್ ಲ್ಯಾಂಡ್ ಪಾದರಕ್ಷೆ ಮಳಿಗೆಯಲ್ಲಿ ನಿನ್ನೆ ರಾತ್ರಿ 10ಗಂಟೆಯ ಸುಮಾರಿಗೆ ಬೆಂಕಿ ಅನಾಹುತ ಸಂಭವಿಸಿದೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್  ನಿಂದ ಈ ದುರಂತ ಸಂಭವಿಸಿದ್ದು ಇದರಿಂದ ಲಕ್ಷಾಂತರ ರೂ. ಮೌಲ್ಯದ ಪಾದರಕ್ಷೆಗಳು ಸುಟ್ಟು ಭಸ್ಮವಾಗಿದೆ ಎಂದು ಮೂಲಗಳು ತಿಳಿಸಿವೆ.

ನಾಲ್ಕು ವಾಹನಗಳಲ್ಲಿ ಸ್ಥಳಕ್ಕೆ ಆಗಮಿಸಿದ ಉಡುಪಿ ಮತ್ತು ಮಲ್ಪೆ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ಮೂಲಕ ಬೆಳಗಿನ ಜಾವ 4.30ರ ಸುಮಾರಿಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

Latest News

error: Content is protected !!