- Advertisement -
![]()
- Advertisement -
ಕಾರ್ಕಳ: ಮಹಿಳೆಯೊಬ್ಬರಿಗೆ ಬಸ್ ವ್ಯವಹಾರ ತಕರಾರಿನ ಕಾರಣದಿಂದ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿರುವ ಘಟನೆ ನಂದಳಿಕೆ ಗ್ರಾಮದ ಕುಂಟಲ್ ಗುಂಡಿ ಎಂಬಲ್ಲಿ ನಡೆದಿದೆ.
ಈ ಕುರಿತು ವಿಲ್ಮಾ ಲೀಯಾ ಡಿಸೋಜಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ವಿಲ್ಮಾ ಲೀಯಾ ಡಿಸೋಜಾ ಅವರಿಗೆ ಮಹೇಶ್ ಗಾಣಿಗ ಎಂಬಾತನೊಂದಿಗೆ ಬಸ್ ವ್ಯವಹಾರದ ವಿಚಾರದಲ್ಲಿ ಏನೋ ಸಮಸ್ಯೆ ಇತ್ತು, ಈ ಕಾರಣದಿಂದ ಆರೋಪಿ ಮಹೇಶ್ ಗಾಣಿಗ ತನ್ನ ಗೆಳೆಯ ನಿತಿನ್ ಶೆಟ್ಟಿ ಎಂಬುವವನೊಂದಿಗೆ ವಿಲ್ಮಾ ಲೀಯಾ ಡಿಸೋಜಾ ಮನೆಗೆ ಅಕ್ರಮ ಪ್ರವೇಶ ಮಾಡಿ ವಿಲ್ಮಾ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದಾರೆ ಅದಲ್ಲದೆ ಹಲ್ಲೆ ತಪ್ಪಿಸಲು ಬಂದ ತಾಯಿ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
- Advertisement -


