Wednesday, May 15, 2024
Homeಕರಾವಳಿಮಂಗಳೂರು: ಮುಂಬೈ - ಮಂಗಳೂರು ಇಂಡಿಗೋ ಏರ್ ಲೈನ್ ನಲ್ಲಿ ತುಳು ಭಾಷೆಯಲ್ಲಿ ಎನೌನ್ಸ್ಮೆಂಟ್ ಮಾಡಿದ...

ಮಂಗಳೂರು: ಮುಂಬೈ – ಮಂಗಳೂರು ಇಂಡಿಗೋ ಏರ್ ಲೈನ್ ನಲ್ಲಿ ತುಳು ಭಾಷೆಯಲ್ಲಿ ಎನೌನ್ಸ್ಮೆಂಟ್ ಮಾಡಿದ ಪ್ರದೀಪ್ ಪದ್ಮಶಾಲಿ- ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ

spot_img
- Advertisement -
- Advertisement -

ಮಂಗಳೂರು: ಇಂಡಿಗೋ ಏರ್ ಲೈನ್ ನಲ್ಲಿ ಮುಂಬೈ – ಮಂಗಳೂರು ಪ್ರಯಾಣದ ವೇಳೆ ವಿಮಾನದ ಫಸ್ಟ್ ಆಫೀಸರ್ ತುಳು ಭಾಷೆಯಲ್ಲಿ ಮಾಡಿರುವ ಎನೌನ್ಸ್ಮೆಂಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕರಾವಳಿಗರ ಮನಗೆದ್ದಿದೆ.

https://www.youtube.com/shorts/vt8Z4FyjDPE

ದೇಶದಲ್ಲಿನ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕ ಹಾಗೂ ಸಾರ್ವಜನಿಕ ಪ್ರಕಟಣೆಯನ್ನು ಮೊದಲು ಸ್ಥಳೀಯ ಭಾಷೆಯಲ್ಲಿ ಹೊರಡಿಸಿ ಆನಂತರ ಹಿಂದಿ ಹಾಗೂ ಇಂಗ್ಲಿಷ್‍ನಲ್ಲಿ ಮಾಡಬೇಕು ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಆದೇಶವಿದೆ. ಈ ಪ್ರಕಾರ ವಿಮಾನ ನಿಲ್ದಾಣಗಳಲ್ಲಿನ ಎಲ್ಲ ಮೌಕಿಕ (ಮೌತ್) ಪ್ರಕಟಣೆಗಳನ್ನು ಮೊದಲು ಸ್ಥಳೀಯ ಭಾಷೆಯಲ್ಲಿ ಹೊರಡಿಸಬೇಕು.

ಈ ಆದೇಶದ ಪ್ರಕಾರ ಮುಂಬೈ ನಿಂದ ಮಂಗಳೂರಿಗೆ ಡಿ.24 ರಂದು ಪ್ರಯಾಣಕ್ಕೆ ಸಿದ್ದವಾದ ಇಂಡಿಗೋ ವಿಮಾನದಲ್ಲಿ ಪೈಲೆಟ್ ಪ್ರದೀಪ್ ಪದ್ಮಶಾಲಿ ಅವರು ಪ್ರಕಟನೆ ಬರೆದು ತಂದ ತುಳುವಿನಲ್ಲಿ ಓದಿ ಹೇಳಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -
spot_img

Latest News

error: Content is protected !!