- Advertisement -
- Advertisement -
ಮಂಗಳೂರು: ದೇಶಕ್ಕೆ ಮಾರಕವಾಗಿರುವಂತಹ ಕೊರೋನಾ ಎಂಬ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ನಮ್ಮ ಆರೋಗ್ಯದ ಹಿತದೃಷ್ಟಿಯಿಂದ, ದೇಶವನ್ನು ಲಾಕ್ ಡೌನ್ ಗೆ ಕರೆ ಕೊಟ್ಟಿರುವಂತಹ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಮುಲ್ಕಿ-ಮೂಡುಬಿದ್ರೆಯ ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಸ್ಥಳೀಯ ದಾನಿಗಳ ಸಹಕಾರದಿಂದ ಪಡುಮರ್ನಾಡ್ ಗ್ರಾಮದ 2ನೇ ವಾರ್ಡಿನ ಸುಮಾರು 250 ಕುಟುಂಬಗಳಿಗೆ ಉಚಿತ ಅಕ್ಕಿ ಹಾಗೂ ಅಗತ್ಯ ವಸ್ತುಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷ ದಯಾನಂದ ಪೈ, ಮಾಜಿ ಅಧ್ಯಕ್ಷ ಶ್ರೀನಾಥ್ ಸುವರ್ಣ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ವಿದ್ಯಾ ಹೆಗ್ಡೆ, ಭವಿಷತ್ ಕೋಟ್ಯಾನ್, ದಾನಿಗಳಾದ ಭೋಜ ಶೆಟ್ಟಿ, ದಯಾನಂದ ಹೆಗ್ಡೆ, ರಘುರಾಜ್ ಕೋಟ್ಯಾನ್, ಸಂಧ್ಯಾ ಹೆಗ್ಡೆ, ಸಂತೋಷ್ ಶೆಟ್ಟಿ, ಸಂತೋಷ್ ಪೂಜಾರಿ, ರಿಮೇಜಸ್ ಪಿಂಟೋ ಮತ್ತಿತರು ಉಪಸ್ಥಿತರಿದ್ದರು.
- Advertisement -