Thursday, July 16, 2026
Homeಕರಾವಳಿಬಂಟ್ವಾಳದಲ್ಲಿ ‌ಮತ್ತೊಂದು‌ ಕೊರೊನಾ ಕೇಸ್; ಮೃತಪಟ್ಟ ಮಹಿಳೆಯ ನೆರೆಮನೆಯ ವೃದ್ದೆಗೆ ಪಾಸಿಟಿವ್

ಬಂಟ್ವಾಳದಲ್ಲಿ ‌ಮತ್ತೊಂದು‌ ಕೊರೊನಾ ಕೇಸ್; ಮೃತಪಟ್ಟ ಮಹಿಳೆಯ ನೆರೆಮನೆಯ ವೃದ್ದೆಗೆ ಪಾಸಿಟಿವ್

- Advertisement -
- Advertisement -

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ‌ ಮತ್ತೊಂದು ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಬಂಟ್ವಾಳ ಭಾಗದ 67 ವರ್ಷದ ವೃದ್ದೆಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ.

ಭಾನುವಾರ ಮೃತಪಟ್ಟ ಬಂಟ್ವಾಳದ ಮಹಿಳೆಯ ಸಂಪರ್ಕದಿಂದ ಸೋಂಕು ಹರಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಬಂಟ್ವಾಳದಲ್ಲಿ ಕೊರೊನಾ ಪರಿಣಾಮದಿಂದ 45 ವರ್ಷದ ಮಹಿಳೆ ಭಾನುವಾರ ಮೃತಪಟ್ಟಿದ್ದು, ಮಹಿಳೆಯ ನೆರೆಮನೆಯಲ್ಲಿ ಈ ವೃದ್ದೆ ವಾಸವಾಗಿದ್ದರು ಎಂದು ಮಾಹಿತಿ ಲಭ್ಯವಾಗಿದೆ.
ವೆನ್ ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ವೃದ್ದೆಗೆ ಚಿಕಿತ್ಸೆ ನೀಡಲಾಗುತ್ತಿದೆ.

- Advertisement -

Latest News

error: Content is protected !!