- Advertisement -
- Advertisement -
ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ. ಜನರು ಮನೆಯಲ್ಲಿ ಬಂಧಿಯಾಗಿದ್ದಾರೆ. ಈ ಸಂದರ್ಭದಲ್ಲಿ ಕೌಟುಂಬಿಕ ಕಲಹಗಳು ಜಾಸ್ತಿಯಾಗಿವೆ. ಬೆಂಗಳೂರಿನ ಪೊಲೀಸರು ಮಹಿಳೆಯರಿಗಾಗಿ ವಿಶೇಷ ಸಹಾಯವಾಣಿ ಶುರು ಮಾಡಿದ್ದಾರೆ.
ಬೆಂಗಳೂರಿನ ಮಹಿಳೆಯೊಬ್ಬಳು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಪತಿ ವಿರುದ್ಧ ದೂರು ನೀಡಿದ್ದಾಳೆ. ತನ್ನನ್ನು ಉಳಿಸುವಂತೆ ಮನವಿ ಮಾಡಿದ್ದಾಳೆ. ಲಾಕ್ ಡೌನ್ ಪ್ರಾರಂಭವಾದಾಗಿನಿಂದ ತನ್ನ ಪತಿ ಸ್ನಾನ ಮಾಡ್ತಿಲ್ಲ ಎಂದಿರುವ ಮಹಿಳೆ ಮಾರ್ಚ್ 24ರ ನಂತ್ರ ಪ್ರತಿ ದಿನ ಸೆಕ್ಸ್ ಗೆ ಪತಿ ಬೇಡಿಕೆಯಿಡುತ್ತಿದ್ದಾನೆಂದು ದೂರಿದ್ದಾಳೆ.
ಕರೆ ಮಾಡಿದ್ದ ಮಹಿಳೆ ಗಂಡನ ಕಿರಾಣಿ ಅಂಗಡಿಯಿದೆ. ಲಾಕ್ ಡೌನ್ ನಂತ್ರ ಕಿರಾಣಿ ಅಂಗಡಿ ಬಂದ್ ಮಾಡಿರುವ ಪತಿ ಸ್ನಾನ ಮಾಡ್ತಿಲ್ಲ. ಪ್ರತಿ ದಿನ ಸೆಕ್ಸ್ ಗೆ ಬೇಡಿಕೆಯಿಡುತ್ತಿದ್ದಾನೆ. ನಿರಾಕರಿಸಿದ್ರೆ ಹೊಡೆಯುತ್ತಾನೆಂದು ದೂರಿದ್ದಾಳಂತೆ.
- Advertisement -