Thursday, June 4, 2026
Homeತಾಜಾ ಸುದ್ದಿರಾಜ್ಯದಲ್ಲಿನ ಅತಿವೃಷ್ಟಿ ಸಂತ್ರಸ್ತರಿಗೆ ಜಿಲ್ಲಾಡಳಿತದ‌ ಮೂಲಕ ದೊರೆಯಲಿದೆ ಡ್ರೈ ರೇಷನ್ ಕಿಟ್

ರಾಜ್ಯದಲ್ಲಿನ ಅತಿವೃಷ್ಟಿ ಸಂತ್ರಸ್ತರಿಗೆ ಜಿಲ್ಲಾಡಳಿತದ‌ ಮೂಲಕ ದೊರೆಯಲಿದೆ ಡ್ರೈ ರೇಷನ್ ಕಿಟ್

- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿನ‌ ಪ್ರವಾಹ ಪೀಡಿತ ಸಂತ್ರಸ್ಥರಿಗೆ ರಾಜ್ಯ ಸರ್ಕಾರ ಡ್ರೈ ರೇಷನ್ ಕಿಟ್ ಗಳನ್ನು ‌ನೀಡಲಿದೆ.

ಕಾಳಜಿ ಕೇಂದ್ರಗಳಲ್ಲಿ ಇರುವವರಿಗೆ ಮತ್ತು ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿರುವವರಿಗೆ ಜಿಲ್ಲಾಡಳಿತದ ಮೂಲಕ ಡ್ರೈ ರೇಷನ್ ಕಿಟ್ ಗಳು ದೊರೆಯಲಿದೆ.

ಈ ಡ್ರೈ ರೇಷನ್ ಕಿಟ್ ನಲ್ಲಿ 10 ಕೆಜಿ ಅಕ್ಕಿ, 1 ಕೆಜಿ ತೊಗರಿಬೇಳೆ, 1 ಕೆಜಿ ಉಪ್ಪು,‌1 ಕೆಜಿ ಸಕ್ಕರೆ, ಸನ್ ಫ್ಲವರ್ ಎಣ್ಣೆ 1 ಲೀಟರ್, 100 ಗ್ರಾಂ ಖಾರದ ಪುಡಿ, 100 ಗ್ರಾಂ ಸಾಸಿವೆ, 100 ಗ್ರಾಂ ಜೀರಿಗೆ, 100 ಗ್ರಾಂ ಸಾಂಬಾರು ಹುಡಿ, 100 ಗ್ರಾಂ ಟೀ ಪೌಡರ್, 50 ಗ್ರಾಂ ಅರಿಶಿಣ ಪುಡಿ ಒಳಗೊಂಡಿರಲಿದೆ.‌

ಕಾಳಜಿ ‌ಕೇಂದ್ರಗಳಲ್ಲಿ ಮತ್ತು ಸಂಬಂಧಿಕರ ಮನೆಗಳಲ್ಲಿ ‌ಆಶ್ರಯ ಪಡೆದಿರುವ ಸಂತ್ರಸ್ತರು ತಮ್ಮ ಮನೆಗಳಿಗೆ ವಾಪಸಾಗುವ ಸಂಧರ್ಭದಲ್ಲಿ ಜಿಲ್ಲಾಡಳಿತದ ಮೂಲಕ ಈ ಡ್ರೈ ರೇಷನ್ ಕಿಟ್ ದೊರೆಯಲಿದೆ.

- Advertisement -

Latest News

error: Content is protected !!