Thursday, June 4, 2026
Homeತಾಜಾ ಸುದ್ದಿಭಾರತ್ ಜೋಡೋ ಪಾದಯಾತ್ರೆ ವೇಳೆ ಐವರಿಗೆ ಕರೆಂಟ್ ಶಾಕ್

ಭಾರತ್ ಜೋಡೋ ಪಾದಯಾತ್ರೆ ವೇಳೆ ಐವರಿಗೆ ಕರೆಂಟ್ ಶಾಕ್

- Advertisement -
- Advertisement -

ಬಳ್ಳಾರಿ: ಭಾರತ್ ಜೋಡೋ ಪಾದಯಾತ್ರೆ ವೇಳೆ ಐವರು ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆಂಟ್ ಶಾಕ್ ತಗುಲಿದೆ.ಬಳ್ಳಾರಿ ಜಿಲ್ಲೆಯ ಆಂಧ್ರ ಪ್ರದೇಶ ಗಡಿಭಾಗದ ಮೋಕಾ ಗ್ರಾಮದ ಬಳಿ ಪಾದಯಾತ್ರೆ ವೇಳೆ ಈ ದುರ್ಘಟನೆ ನಡೆದಿದೆ.

ಕಬ್ಬಿಣದ ಪೈಪ್ ನ ಬಾವುಟ ಹಿಡಿದು ಹೆಜ್ಜೆ ಹಾಕುತ್ತಿದ್ದ ವೇಳೆ ಮೇಲ್ಭಾಗದಲ್ಲಿದ್ದ ವಿದ್ಯುತ್ ಲೈನ್ ಗೆ ಪೈಪ್ ತಗುಲಿ ಶಾಕ್ ಹೊಡೆದಿದೆ.ಶಾಕ್ ತಗುಲಿದ ಕಾರ್ಯಕರ್ತರನ್ನು ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ವಿದ್ಯುತ್ ಶಾಕ್ ತಗುಲಿದ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಣ್ಣ ಸೇರಿದಂತೆ ಕಾರ್ಯಕರ್ತರನ್ನು ರಾಹುಲ್ ಗಾಂಧಿ ಮೋಕಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭೇಟಿ ಮಾಡಿದ್ದಾರೆ.ಭದ್ರತಾ ಸಿಬ್ಬಂದಿಗೂ ಮಾಹಿತಿ ನೀಡದೇ ರಾಹುಲ್ ಗಾಂಧಿ ಆಸ್ಪತ್ರೆಗೆ ತೆರಳಿದ್ದು, ತಲಾ ಒಂದು ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ.

- Advertisement -

Latest News

error: Content is protected !!