Sunday, May 5, 2024
Homeತಾಜಾ ಸುದ್ದಿಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆ; ಪತಿಯಿಂದ ಮಗು ಪಡೆಯಲು ಆತನಿಗೆ ಜಾಮೀನು ನೀಡಿ...

ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆ; ಪತಿಯಿಂದ ಮಗು ಪಡೆಯಲು ಆತನಿಗೆ ಜಾಮೀನು ನೀಡಿ ಎಂದು ಹೈಕೋರ್ಟ್ ಮೊರೆ ಹೋದ ಪತ್ನಿ

spot_img
- Advertisement -
- Advertisement -

ರಾಜಸ್ಥಾನ: ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆಗಾಗಿ ಜೈಲಿನಲ್ಲಿರುವ ಆರೋಪಿಯೊಬ್ಬ ಪತ್ನಿ ಆತನಿಂದ ತನಗೆ ಮಗು ಬೇಕು ಎಂದು ಆತನಿಗೆ ಜಾಮೀನು ನೀಡುವಂತೆ ಹೈಕೋರ್ಟ್ ಮೊರೆ ಹೋದ ಘಟನೆ  ರಾಜಸ್ಥಾನದಲ್ಲಿ ನಡೆದಿದೆ.

ಬಾಲಕಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ 25 ವರ್ಷದ ರಾಹುಲ್ ಎಂಬಾತನಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.ರಾಹುಲ್ ರಾಜಸ್ಥಾನದ ಅಲ್ವಾರ್ ಸೆಂಟ್ರಲ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಆತನಿಂದ ಮಗು ಬೇಕು ಎಂದು ಪತ್ನಿ ಕೋರ್ಟ್ ಮೊರೆ ಹೋಗಿದ್ದಾಳೆ.ಶನಿವಾರ ರಾಜಸ್ಥಾನ ಹೈಕೋರ್ಟ್ ನ್ಯಾಯಮೂರ್ತಿಗಳಾದ ಸಂದೀಪ್ ಮೆಹ್ತಾ ಮತ್ತು ಸಮೀರ್ ಜೈನ್ ಅವರಿದ್ದ ವಿಭಾಗೀಯ ಪೀಠವು ಪತ್ನಿಯ ಅರ್ಜಿಯನ್ನು ಪುರಸ್ಕರಿಸಿ 15 ದಿನಗಳ ಪೆರೋಲ್ ನೀಡಿ ಆದೇಶಿಸಿದೆ.

ರಾಹುಲ್ ಪತ್ನಿ ಬ್ರಿಜೇಶ್ ದೇವಿ ತಾನು ತಾಯಿ ಆಗಬೇಕೆಂಬ ಇಚ್ಛೆ ಹೊಂದಿದ್ದು, ಪತಿಗೆ ಪೆರೋಲ್ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದಳು. ಈ ಬಗ್ಗೆ ಕೋರ್ಟ್ ಆಕೆಯ ವಯಸ್ಸನ್ನು ಪರಿಗಣಿಸಿ ಸೆರೆವಾಸದಲ್ಲಿರುವ ಅಪರಾಧಿ ಪತಿಯೊಂದಿಗೆ ತನ್ನ ಮದುವೆಯ ಬಂಧ ಉಳಿಸಿಕೊಳ್ಳಲು 15 ದಿನಗಳ ತುರ್ತು ಪೆರೋಲ್‌ನಲ್ಲಿ ಬಿಡುಗಡೆ ಮಾಡಲು ನ್ಯಾಯಾಲಯವು ಒಪ್ಪಿಗೆ ನೀಡಿದೆ.

- Advertisement -
spot_img

Latest News

error: Content is protected !!