Saturday, June 6, 2026
Homeಕರಾವಳಿಬೆಳ್ತಂಗಡಿ : ಎರಡು ಬೈಕ್ ಗಳ ನಡುವೆ ಅಪಘಾತ: ಮೂವರಿಗೆ ಗಂಭೀರ ಗಾಯ,ಮಂಗಳೂರು ಆಸ್ಪತ್ರೆಗೆ ದಾಖಲು

ಬೆಳ್ತಂಗಡಿ : ಎರಡು ಬೈಕ್ ಗಳ ನಡುವೆ ಅಪಘಾತ: ಮೂವರಿಗೆ ಗಂಭೀರ ಗಾಯ,ಮಂಗಳೂರು ಆಸ್ಪತ್ರೆಗೆ ದಾಖಲು

- Advertisement -
- Advertisement -

ಬೆಳ್ತಂಗಡಿ : ಎರಡು ಬೈಕ್ ಗಳ ನಡುವೆ  ಅಪಘಾತ ಸಂಭವಿಸಿ ಅಣ್ಣ ತಂಗಿ ಸೇರಿ ಮೂವರು ಗಂಭೀರ ಗಾಯಗೊಂಡ ಘಟನೆ ಬೆಳಾಲಿನ ನೆಕ್ಕಲದಲ್ಲಿ ನಡೆದಿದೆ‌.

ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ನೆಕ್ಕಿಲ ಎಂಬಲ್ಲಿ ಎರಡು ಬೈಕ್ ನಡುವೆ ಅಪಘಾತ ನಡೆದು ಒಂದು ಬೈಕ್ ನಲ್ಲಿದ್ದ ಕೊಯ್ಯೂರು ಗ್ರಾಮದ ಜೆಂಕಿನಡ್ಕ ನಿವಾಸಿ ಉಮೇಶ್ ಗೌಡರ ಮಗ ಕಾರ್ತಿಕ್ ಮತ್ತು ಮಗಳು ಕೃಪಾಗೆ ತಲೆ ಹಾಗೂ ಕಾಲಿಗೆ ಗಂಭೀರ ಗಾಯವಾಗಿದೆ.  ಮತ್ತೊಂದು ಬೈಕ್ ಸವಾರ ಡೆಲಿವರಿ ಬಾಯ್ ಫೈರೋಜ್ ಅವರ ಕಾಲಿಗೂ ಗಂಭೀರ ಗಾಯವಾಗಿದ್ದು ಮೂವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಮೇಶ್ ಗೌಡರ ಮಕ್ಕಳಾದ ಕಾರ್ತಿಕ್ ಮತ್ತು ಕೃಪಾ ಮನೆಯಿಂದ ಬೈಕ್ ನಲ್ಲಿ ಬೆಳಾಲು ದೇವಸ್ಥಾನಕ್ಕೆ ಹೋಗುತ್ತಿದ್ದರು. ಬೆಳಾಲಿನಿಂದ ಬೆಳ್ತಂಗಡಿ ಕಡೆಗೆ ಡೆಲಿವರಿ ಬಾಯ್ ಫೈರೋಜ್ ಬರುತ್ತಿದ್ದಾಗ ಅಪಘಾತ ನಡೆದಿದೆ.ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!