- Advertisement -
![]()
- Advertisement -
ಕುಂದಾಪುರ: ವನ್ಯಜೀವಿ ಬೇಟೆಯಾಡಿದ ಐವರನ್ನು ಬಂಧನ ಮಾಡಲಾಗಿದೆ. ಕುಂದಾಪುರ ತಾಲೂಕಿನ ಶಿರೂರು ಮೂರು ಕೈ ಗ್ರಾಮದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಿರೂರು ಮೂರು ಕೈಯಿಂದ ಸಾಯ್ಬರಕಟ್ಟೆ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಬ್ರಹ್ಮಾವರದ ತಾಲೂಕು ಚೇರ್ಕಾಡಿ ಗ್ರಾಮದ ಪೇತ್ರಿ ನಿವಾಸಿಗಳಾಸ
ರಾಘವೇಂದ್ರ, ಪ್ರಶಾಂತ್, ಅರುಣ್, ಚೇತನ್ ಮತ್ತು ದೀಕ್ಷಿತ್ ಎಂಬವರನ್ನು ಬಂಧಿಸಲಾಗಿದೆ.
ಆರೋಪಿಗಳಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಈ ವೇಳೆ ಗಾಯಗೊಂಡಿದ್ದ ಬರ್ಕ ಮತ್ತು ಮೊಲ ಪತ್ತೆಯಾಗಿವೆ.
ನಳಿಕೆ ತೋಟೆ ಕೋವಿ, 4 ತೋಟೆಗಳು, 1 ಖಾಲಿ ತೋಟೆಯನ್ನು ವಶಕ್ಕೆ ಪಡೆಯಲಾಗಿದ್ದು, ಟಾರ್ಚ್, ಎರಡು ಹೆಡ್ ಟಾರ್ಚ್ ಲೈಟ್, 1970 ರೂಪಾಯಿ ನಗದು ಮತ್ತು 5 ಮೊಬೈಲ್ ಫೋನ್ ಗಳನ್ನು ಕೂಡಾ ವಶಕ್ಕೆ ಪಡೆಯಲಾಗಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


