Friday, May 17, 2024
Homeತಾಜಾ ಸುದ್ದಿತೆರೆಮೇಲೆ ಬರಲಿದೆ ಅಟಲ್‌ ಬಿಹಾರಿ ವಾಜಪೇಯಿ ಅವರ ಜೀವನಗಾಥೆ: ವಾಜಪೇಯಿ ಬಯೋಪಿಕ್‌ಗೆ ಸಿಕ್ಕಿದೆ ಚಾಲನೆ

ತೆರೆಮೇಲೆ ಬರಲಿದೆ ಅಟಲ್‌ ಬಿಹಾರಿ ವಾಜಪೇಯಿ ಅವರ ಜೀವನಗಾಥೆ: ವಾಜಪೇಯಿ ಬಯೋಪಿಕ್‌ಗೆ ಸಿಕ್ಕಿದೆ ಚಾಲನೆ

spot_img
- Advertisement -
- Advertisement -

ಬಾಲಿವುಡ್‌ನಲ್ಲಿ ಈಗಾಗಲೇ ಸಾಕಷ್ಟು ಬಯೋಪಿಕ್‌ಗಳು ಬಂದಿವೆ, ಬರುತ್ತಲಿವೆ. ಸಿನಿಮಾರಂಗ, ಕ್ರೀಡೆ, ರಾಜಕೀಯ ಹೀಗೆ ಹಲವು ಕ್ಷೇತ್ರಗಳ ಪ್ರಭಾವಿ ವ್ಯಕ್ತಿಗಳ ಬದುಕನ್ನು ತೆರೆಮೇಲೆ ತರಲಾಗುತ್ತಿದೆ. ಸಾಲಿಗೆ ಈಗ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಹೆಸರು ಕೂಡ ಕೇಳಿಬಂದಿದೆ. ಹೌದು, ಭಾರತ ಕಂಡಂತಹ ಅದ್ಭುತ ವಾಗ್ಮಿ, ಮಾಜಿ ಪ್ರಧಾನ ಮಂತ್ರಿ ಅಟಲ್‌ ಬಿಹಾರಿ ವಾಜಪೇಯಿ (Atal Bihari Vajpayee) ಅವರ ಬಯೋಪಿಕ್‌ (Biopic) ಅನ್ನು ನಿರ್ಮಾಣ ಮಾಡುವುದಾಗಿ ಬಾಲಿವುಡ್‌ನ ಖ್ಯಾತ ನಿರ್ಮಾಣ ಸಂಸ್ಥೆ ಅನೌನ್ಸ್‌ ಮಾಡಿದೆ.

ಭಾರತೀಯರು ಕಂಡಂತಹ ಒಬ್ಬ ಉತ್ತಮ ನಾಯಕ, ಲೇಖಕ, ಕವಿ ಅಟಲ್‌ ಬಿಹಾರಿ ವಾಜಪೇಯಿ ಅವರು ಭಾರತದ ಪ್ರಧಾನ ಮಂತ್ರಿಯಾಗಿದ್ದರು. 1996ರಲ್ಲಿ 16 ದಿನಗಳ ಕಾಲ ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿ ಆಗಿದ್ದರು. ನಂತರ 1998ರ ಮಾರ್ಚ್‌ನಿಂದ 1999ರ ಅಕ್ಟೋಬರ್ ವರೆಗೆ ದೇಶವನ್ನು ಮುನ್ನಡೆಸಿದ್ದರು. 1999ರ ಅಕ್ಟೋಬರ್‌ನಿಂದ 2004ರ ಮೇ ತಿಂಗಳವರೆಗೆ ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿ ಆಗಿದ್ದರು. ಒಟ್ಟು ಮೂರು ಬಾರಿ ಪ್ರಧಾನಿಯಾಗಿ ವಾಜಪೇಯಿ ಅವರು ಕೆಲಸ ಮಾಡಿದ್ದರು.

2023ರ ಆರಂಭದಲ್ಲಿ ‘ಅಟಲ್’ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. 2023ರ ಕ್ರಿಸ್‌ಮಸ್‌ಗೆ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್‌ ಮಾಡಿಕೊಂಡಿದೆ. 2023ರ ಡಿ.25ರಂದು ಅಟಲ್‌ ಬಿಹಾರಿ ವಾಜಪೇಯಿ ಅವರ 99ನೇ ಜನ್ಮ ಜಯಂತಿ. ಅಂದೇ ಸಿನಿಮಾವನ್ನು ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ವಿನೋದ್ ಭಾನುಶಾಲಿ, ಸಂದೀಪ್ ಸಿಂಗ್ ಜೊತೆಗೆ ಸ್ಯಾಮ್ ಖಾನ್, ಕಮಲೇಶ್‌ ಭಾನುಶಾಲಿ, ವಿಶಾಲ್ ಗುರ್ನಾನಿ, ಜೀಶಾನ್ ಅಹ್ಮದ್, ಶಿವ್‌ ಶರ್ಮಾ, ಜೂಹಿ ಪರೇಖ್ ಮೆಹ್ತಾ ಅವರು ಕೂಡ ಚಿತ್ರಕ್ಕೆ ನಿರ್ಮಾಪಕರಾಗಿದ್ದಾರೆ. ಅಂದಹಾಗೆ, ಈ ಹಿಂದೆ ನರೇಂದ್ರ ಮೋದಿ ಬಯೋಪಿಕ್ ಅನ್ನು ಸಂದೀಪ್ ಸಿಂಗ್ ನಿರ್ಮಾಣ ಮಾಡಿದ್ದರು.

- Advertisement -
spot_img

Latest News

error: Content is protected !!