Friday, September 13, 2024
Homeಕರಾವಳಿಉಡುಪಿಕರಾವಳಿಯಲ್ಲಿ ಶುರುವಾಗಿದೆ 'ಯಂಕ್ಲೆಗ್ ಮೀನ್ ಬೋಡು' ಅಭಿಯಾನ

ಕರಾವಳಿಯಲ್ಲಿ ಶುರುವಾಗಿದೆ ‘ಯಂಕ್ಲೆಗ್ ಮೀನ್ ಬೋಡು’ ಅಭಿಯಾನ

spot_img
- Advertisement -
- Advertisement -

ಕರಾವಳಿಯ ಜನ ಮೀನು ಪ್ರಿಯರು. ಆದರೆ ಸದ್ಯ ಮೀನು ಪ್ರಿಯರಿಗೆ ಟೈಮ್ ಚೆನ್ನಾಗಿಲ್ಲ. ಈ ಬಾರಿ ಮತ್ಸ್ಯಕ್ಷಾಮದ ಬೆನ್ನಿಗೇ ಲಾಕ್ ಡೌನ್ ಬಂದಿದೆ. ಹೀಗಾಗಿ ಮೀನು ಪ್ರಿಯರಿಗೆ ಭಾರೀ ನಿರಾಸೆಯಾಗಿದೆ.ಈ ಮಧ್ಯೆ ಸೂಕ್ತ ಸುರಕ್ಷಾ ಕ್ರಮಗಳನ್ನು ಅನುಸರಿಸಿ ಮೀನು ಮಾರಾಟ ಮತ್ತು ಖರೀದಿಗೆ ಅವಕಾಶ ನೀಡಬೇಕು ಎಂಬ ಅಭಿಯಾನ ಉಡುಪಿಯಲ್ಲಿ ಪ್ರಾರಂಭವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಯಂಕ್ಲೆಗ್ ಮೀನ್ ಬೋಡು ( ನಮಗೆ ಮೀನು ಬೇಕು) ಅಭಿಯಾನದ ಮೂಲಕ ಡಿಸಿ ಮೇಲೆ ಒತ್ತಡ ಹೇರುವ ಪ್ರಯತ್ನ ಮೀನು ಪ್ರಿಯರಿಂದ ನಡೆದಿದೆ. ಹಾಗೆ ನೋಡಿದರೆ ಮೀನುಗಾರಿಕೆಗೆ ಈಗ ನಿಷೇಧ ಇಲ್ಲ. ಐದು ಜನ ಸೇರಿ ಮೀನು ಹಿಡಿಯಬಹುದು ಮತ್ತು ಜನಸಂದಣಿ ಆಗದಂತೆ ಎಚ್ಚರ ವಹಿಸಿ ಮಾರಾಟ ಮಾಡಬಹುದು ಎಂದು ಜಿಲ್ಲಾಧಿಕಾರಿ ಈ ಮೊದಲೇ ಸ್ಪಷ್ಟಪಡಿಸಿದ್ದಾರೆ. ಆದರೂ ಜನರಿಗೆ ಮೀನು ಸಿಗುತ್ತಿಲ್ಲ. ಒಂದೆಡೆ ತರಕಾರಿ ಬೆಲೆ ಗಗನಕ್ಕೇರಿದ್ದರೆ, ಕೋಳಿ ತಿನ್ನಲು ಕೆಲವರು ಹಿಂಜರಿಯುತ್ತಿದ್ದಾರೆ.

ಇನ್ನು ಮಟನ್ ಬೆಲೆ ಮಧ್ಯಮ ವರ್ಗ ಮತ್ತು ಬಡವರಿಗೆ ಎಟುಕುತ್ತಿಲ್ಲ. ಹೀಗಾಗಿ ಮೀನು ಬೇಕು ಅಭಿಯಾನದ ಮೂಲಕ ಡಿಸಿ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆದಿದೆ. ಗಮನಾರ್ಹ ಸಂಗತಿ ಅಂದರೆ, ಮಲ್ಪೆಯಲ್ಲಿ ಎಂದಿನಂತೆ ಮೀನುಗಾರಿಕೆಗೆ ಅವಕಾಶ ಕೊಟ್ಟಿದ್ದೇ ಆದರೆ ನೂರಾರು ಜನ‌ ಬಂದರಿಗೆ ದೌಡಾಯಿಸುತ್ತಾರೆ.
ಆಗ ಸಾಮಾಜಿಕ ಅಂತರಕ್ಕೆ ಸಮಸ್ಯೆ ಉಂಟಾಗಲಿದೆ ಎಂಬ ಕಾರಣಕ್ಕೆ ಐದೇ ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಜನರಿಗೆ ಮೀನು‌ ಪೂರೈಕೆ ಆಗುತ್ತಿಲ್ಲ, ಜೊತೆಗೆ ಬೋಟ್ ಮಾಲೀಕರಿಗೂ ತಂದಿರುವ ಮೀನು‌ ಮಾರಾಟ ಮಾಡಲು ಕಷ್ಟ ಆಗುತ್ತಿದೆ.

- Advertisement -
spot_img

Latest News

error: Content is protected !!