- Advertisement -
- Advertisement -
ಬೆಂಗಳೂರು : ಲಂಡನ್ ನ ಲ್ಯಾಂಬೆತ್ ನಗರದ ಮಾಜಿ ಮೇಯರ್, ಕನ್ನಡಿಗ ಡಾ. ನಿರಜ್ ಪಾಟೀಲ್ ಅವರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.
ಹೌದು, ಸ್ವತಃ ವೈದ್ಯಗಾಗಿರುವ ನೀರಜ್ ಪಾಟೀಲ್ ಗೆ ಕೆಲದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು. ಭಾರತಲ್ಲಿರುವ ತಮ್ಮ ಸ್ಹೇಹಿತರಿಗೆ ಸಾಮಾಜಿಕ ಜಾಲತಾಣದ ಮೂಲಕ ಈ ಕುರಿತು ಮಾಹತಿ ನೀಡಿದ್ದಾರೆ. ನಾನು ನಿಯಮಿತವಾಗಿ ಜಿಮ್ ಗೆ ಹೋಗುತ್ತನೇ. ಯಾವಾಗಲೂ ಆರೋಗ್ಯಕರ ಆಹಾರ ಪದ್ಧತಿ ಅನುಸುರಿಸುತ್ತೇನೆ. ಧೂಮಪಾನದ ಚಟ ಇಲ್ಲ, ಆದರೂ ನನಗೆ ಕೊರೊನಾ ಸೋಂಕು ಹರಡುತ್ತದೆ ಎಂದುಕೊಂಡಿರಲಿಲ್ಲ ಎಂದು ಹೇಳಿದ್ದಾರೆ.
ಆದಷ್ಟು ಬೇಗ ಗುಣ ಹೊಂದಿ ಮತ್ತೆಎಂದಿನಂತೆ ಕೆಲಸ ಕಾರ್ಯಗಳಲ್ಲಿ ತೊಡಗುತ್ತೇನೆಂಬ ವಿಶ್ವಾಸ ವಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
- Advertisement -