- Advertisement -
- Advertisement -
ಬೆಳ್ತಂಗಡಿ: ನಡ ಗ್ರಾಮದ ಪೆರ್ಮಾಣು ಸುರ್ಯ ಶಾಲೆಯಲ್ಲಿ ಲಾಕ್‌ಡೌನ್‌ನಿಂದಾಗಿ ಸಂಕಷ್ಟದ ಸ್ಥಿತಿಯಲ್ಲಿರುವ ಸ್ಥಳೀಯ ಜನರಿಗೆ ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್ ಅಗತ್ಯ ದಿನಬಳಕೆಯ ದಿನಸಿ ಸಾಮಾಗ್ರಿಗಳನ್ನು ವಿತರಿಸಿದರು.
ಈ ಸಂದರ್ಭ ಬೆಳ್ತಂಗಡಿ ಸಿ.ಎ. ಬ್ಯಾಂಕ್ ಅಧ್ಯಕ್ಷ ಮುನಿರಾಜ್ ಅಜ್ರಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಜಶೇಖರ್ ಅಜ್ರಿ, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್, ಕೆಪಿಸಿಸಿ ಎಸ್ಸಿ ಘಟಕ ಸದಸ್ಯ ನಾಗರಾಜ್ ಎಸ್. ಲಾಯಿಲ, ಸುರ್ಯ ಶಾಲೆ ಎಸ್.ಡಿ.ಎಂ.ಸಿ ಅದ್ಯಕ್ಷ ಪದ್ಮನಾಭ ಗೌಡ, ನಡ ಗ್ರಾ.ಪಂ. ಸದಸ್ಯ ರಮೇಶ್, ಅಶಾ ಕಾರ್ಯಕರ್ತೆಯರಾದ ಶೋಭ ಜಯ ಕುಮಾರ್, ಉಷಾ ಕುದ್ಮುಲ, ರಮೇಶ್ ಸುವರ್ಣ ಕುತ್ರೋಟು, ಸೈಯದ್ ಇಕ್ಬಾಲ್ ಮಂಜೊಟ್ಟಿ, ಪುರಂದರ ಸುರ್ಯ ಹಾಗು ಸ್ಥಳೀಯರು ಉಪಸ್ಥಿತರಿದ್ದರು.
- Advertisement -