- Advertisement -
![]()
- Advertisement -
ಮಂಗಳೂರು: ಸ್ನಾನಕ್ಕೆಂದು ಬಾತ್ ರೂಂಗೆ ತೆರಳಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮೇಶ್ವರ ಬಸ್ಸು ತಂಗುದಾಣದ ಬಳಿ ನಡೆದಿದೆ.
ಸೋಮೇಶ್ವರ ಬಸ್ಸು ತಂಗುದಾಣದ ಬಳಿಯ ನಿವಾಸಿ ಶಾಂತಿ ಎಂಬವರ ಪುತ್ರಿ ಸಮನ್ವಿ (16) ಮೃತ ವಿದ್ಯಾರ್ಥಿನಿ.
ಸಮನ್ವಿ ಸೋಮೇಶ್ವರದ ಖಾಸಗಿ ವಿದ್ಯಾ ಸಂಸ್ಥೆಯ ವಿಜ್ಞಾನ ವಿಭಾಗದಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಳು. ಭಾನುವಾರ ಸಂಜೆ ಮನೆಯಲ್ಲಿ ತಾಯಿ ಹಾಗೂ ಹಿರಿಯ ಸಹೋದರಿ ಇದ್ದಾಗ ಸ್ನಾನಕ್ಕೆಂದು ಕೋಣೆಗೆ ಸೇರಿದ ಸಮನ್ವಿ ಎಷ್ಟು ಹೊತ್ತಾದರೂ ಹೊರಬಾರದೆ ಇದ್ದು, ಮನೆ ಮಂದಿ ಮನೆಯ ಬಾಗಿಲು ಮುರಿದು ಒಳ ನುಗ್ಗಿದಾಗ ಆತ್ಮಹತ್ಯೆ ನಡೆಸಿರೋದು ಗೊತ್ತಾಗಿದೆ.
ಉಳ್ಳಾಲ ಠಾಣಾ ಪೊಲೀಸರು ಮೃತ ದೇಹವನ್ನ ಮರಣೋತ್ತರ ಪರೀಕ್ಷೆ ನಡೆಸಿ,ಯುಡಿಆರ್ ಪ್ರಕರಣ ದಾಖಲಿಸಿದ್ದಾರೆ.ಘಟನಾ ಸ್ಥಳದಲ್ಲಿ ಪೊಲೀಸರಿಗೆ ಡೆತ್ ನೋಟ್ ಲಭಿಸದ ಕಾರಣ ಸಮನ್ವಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತ ಸಮನ್ವಿ ತಂದೆ, ತಾಯಿ, ಸಹೋದರಿಯನ್ನ ಅಗಲಿದ್ದಾಳೆ.
- Advertisement -


