Sunday, June 7, 2026
Homeಕರಾವಳಿಉಡುಪಿಕೋವಿಡ್‌ ಲಸಿಕೆ ಪ್ರಥಮ ಡೋಸ್‌; ಶೇ.100 ಗುರಿ ತಲುಪಿದ ಉಡುಪಿ ಜಿಲ್ಲೆ!

ಕೋವಿಡ್‌ ಲಸಿಕೆ ಪ್ರಥಮ ಡೋಸ್‌; ಶೇ.100 ಗುರಿ ತಲುಪಿದ ಉಡುಪಿ ಜಿಲ್ಲೆ!

- Advertisement -
- Advertisement -

ಉಡುಪಿ: ಬೆಂಗಳೂರು ನಂತರ ಉಡುಪಿ ಜಿಲ್ಲೆಯು ಕೋವಿಡ್‌ ಲಸಿಕೆಯ ಪ್ರಥಮ ಡೋಸ್‌ ನೀಡುವಲ್ಲಿ ಶೇ 100 ಗುರಿ ಸಾಧನೆ ಮಾಡಿದೆ ಎಂದು ಆರೋಗ್ಯ ಸಚಿವರಾದ ಡಾ.ಕೆ.ಸುಧಾಕರ್ ಟ್ವಿಟ್ಟರ್‌ನಲ್ಲಿ ಶ್ಲಾಘಿಸಿದ್ದಾರೆ.

ಜಿಲ್ಲೆಯಲ್ಲಿ ಮೊದಲ ಡೋಸ್ ಲಸಿಕೆ ಪಡೆಯಲು ಅರ್ಹ 9,01,568 ಮಂದಿ ಇದ್ದು, 9,08,139 ಮಂದಿಗೆ ಮೊದಲ ಡೋಸ್ ಹಾಕಲಾಗಿದೆ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.ರಾಜ್ಯದಲ್ಲಿ ಉಡುಪಿ ಜಿಲ್ಲೆ ಹಾಗೂ ಬೆಂಗಳೂರು ನಗರ ಜಿಲ್ಲೆ ಮಾತ್ರ ಶೇ 100ರಷ್ಟು ಲಸಿಕೆ ಗುರಿ ಮುಟ್ಟಿದ್ದು, ಸಾಧನೆಗೆ ಕಾರಣರಾದ ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಜಿಲ್ಲಾಡಳಿತಕ್ಕೆ ಸಚಿವರು ಅಭಿನಂದನೆ ಸಲ್ಲಿಸಿದ್ದಾರೆ.

- Advertisement -

Latest News

error: Content is protected !!