Wednesday, June 3, 2026
Homeಕರಾವಳಿಸುಳ್ಯ; ಬಾಳಿಲದಲ್ಲಿ ಸ್ಮೋಕ್ ಹೌಸ್ ನಲ್ಲಿ ಬೆಂಕಿ ಅನಾಹುತ; ಅಪಾರ ಪ್ರಮಾಣದ ತೆಂಗಿನಕಾಯಿ, ರಬ್ಬರ್ ಬೆಂಕಿಗಾಹುತಿ

ಸುಳ್ಯ; ಬಾಳಿಲದಲ್ಲಿ ಸ್ಮೋಕ್ ಹೌಸ್ ನಲ್ಲಿ ಬೆಂಕಿ ಅನಾಹುತ; ಅಪಾರ ಪ್ರಮಾಣದ ತೆಂಗಿನಕಾಯಿ, ರಬ್ಬರ್ ಬೆಂಕಿಗಾಹುತಿ

- Advertisement -
- Advertisement -

ಸುಳ್ಯ: ಸ್ಮೋಕ್ ಹೌಸ್ ನಲ್ಲಿ ಬೆಂಕಿ ಅನಾಹುತ ಸಂಭವಿಸಿ,ಅಪಾರ ಪ್ರಮಾಣದ ತೆಂಗಿನಕಾಯಿ, ರಬ್ಬರ್ ಬೆಂಕಿಗಾಹುತಿಯಾಗಿರುವ ಘಟನೆ ಬಾಳಿಲ ಗ್ರಾಮದ   ಕಾಂಚೋಡು ನಾರಾಯಣ ರಾವ್ ರವರ ಮನೆಯಲ್ಲಿ ನಡೆದಿದೆ.

 ಸ್ಮೋಕ್ ಹೌಸ್ ಗೆ ಬೆಂಕಿ ತಗುಲಿದ ಪರಿಣಾಮ ಸುಮಾರು 4,500 ಕ್ಕಿಂತಲೂ ಅಧಿಕ ಒಣಗಿದ ತೆಂಗಿನಕಾಯಿ, ರಬ್ಬರ್ ಬೆಂಕಿಗಾಹುತಿಯಾಗಿದೆ ಎಂದು ತಿಳಿದು ಬಂದಿದೆ.  ವಿಷಯ ತಿಳಿದಂತೆ ಸ್ಥಳೀಯರು ಆಗಮಿಸಿ ಪೈಪಿನಲ್ಲಿ ನೀರು ಹಾಯಿಸಿ ಬೆಂಕಿ ಮನೆಯ ಭಾಗಕ್ಕೆ ಹರಡುವುದನ್ನು ತಡೆದಿದ್ದಾರೆ.

ಬಳಿಕ ಸುಳ್ಯ ಅಗ್ನಿಶಾಮಕ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ  ಯಶಸ್ವಿಯಾಗಿದ್ದಾರೆ.

- Advertisement -

Latest News

error: Content is protected !!