Sunday, June 7, 2026
Homeಕರಾವಳಿಉಗ್ರ ಚಟುವಟಿಕೆ ಆರೋಪಡಿ ಬಂಧಿತ ಮಾಝ್ ಅಹಮದ್ ನನ್ನು ಬಂಟ್ವಾಳಕ್ಕೆ ಕರೆತಂದ ಶಿವಮೊಗ್ಗ ಪೊಲೀಸರು

ಉಗ್ರ ಚಟುವಟಿಕೆ ಆರೋಪಡಿ ಬಂಧಿತ ಮಾಝ್ ಅಹಮದ್ ನನ್ನು ಬಂಟ್ವಾಳಕ್ಕೆ ಕರೆತಂದ ಶಿವಮೊಗ್ಗ ಪೊಲೀಸರು

- Advertisement -
- Advertisement -

ಬಂಟ್ವಾಳ: ಉಗ್ರ ಚಟುವಟಿಕೆ ಸಂಬಂಧ ಶಿವಮೊಗ್ಗದಲ್ಲಿ ಬಂಧಿಸಲ್ಪಟ್ಟಿರುವ ಶಂಕಿತ ಆರೋಪಿ ಮಾಝ್ ಅಹ್ಮದ್ ನನ್ನು ಪೊಲೀಸರು ಸ್ಥಳ ಮಹಜರಿಗಾಗಿ ಬಂಟ್ವಾಳಕ್ಕೆ ಕರೆತಂದಿದ್ದಾರೆ.

ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರಯ್ಯ ಹಾಗೂ ಆಗುಂಬೆ ಪಿಎಸ್ಐ ಶಿವಕುಮಾರ್ ನೇತೃತ್ವದ ತಂಡ ಬಂಟ್ವಾಳ ತಾಲೂಕಿನ ನಾವೂರು ಗ್ರಾಮಕ್ಕೆ ಆರೋಪಿ ಮಾಝ್ ನನ್ನು ಕರೆತಂದಿದೆ.

ನಾವೂರು ಗ್ರಾಮದ ವ್ಯಾಪ್ತಿಯ ಸುಲ್ತಾನ್‌ಕಟ್ಟೆ ಮತ್ತು ಅಗ್ರಹಾರ ಬಳಿ‌ ಪೊಲೀಸರು ಸ್ಥಳ ಮಹಜರು‌ ನಡೆಸಿದ್ದಾರೆ. ಈ ಪ್ರದೇಶಗಳಲ್ಲಿ ಬಾಂಬ್ ಸ್ಫೋಟದ ರಿಹರ್ಸಲ್ ಮಾಡುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿರುವ ಹಿನ್ನೆಲೆಯಲ್ಲಿ ಸ್ಥಳ ಮಹಜರು ನಡೆಸಲಾಗಿದೆ. ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳದ ಜೊತೆಗೆ ಪರಿಶೀಲನೆ ನಡೆದಿದೆ. ‌

- Advertisement -

Latest News

error: Content is protected !!