Friday, June 26, 2026
Homeತಾಜಾ ಸುದ್ದಿಜೋಳ ಹುರಿಯುವಾಗ ಬೆಂಕಿ ಅನಾಹುತ: 6 ಮಕ್ಕಳು ಸಜೀವ ದಹನ

ಜೋಳ ಹುರಿಯುವಾಗ ಬೆಂಕಿ ಅನಾಹುತ: 6 ಮಕ್ಕಳು ಸಜೀವ ದಹನ

- Advertisement -
- Advertisement -

ಬಿಹಾರ: ಜೋಳ ಹುರಿಯುವಾಗ ಬೆಂಕಿ ಅನಾಹುತ ಸಂಭವಿಸಿ ಆರು ಮಕ್ಕಳು ಸಜೀವ ದಹನವಾಗಿರುವ ಘಟನೆ ಬಿಹಾರ ರಾಜ್ಯದ ಅರಾರಿಯಾ ಜಿಲ್ಲೆಯ ಕವಾಯಾ ಗ್ರಾಮದಲ್ಲಿ ನಡೆದಿದೆ.

ಅಶ್ರಫ್, ಗುಲ್ನಾಜ್, ದಿಲ್ಬಾರ್, ತಬ್ರೆಜ್, ಅಲಿ ಹಸನ್ ಮತ್ತು ಹುಸ್ನಾರಾ ಮೃತ ಮಕ್ಕಳು. ಮಕ್ಕಳು ಗುಡಿಸಲಿನಲ್ಲಿ ಜೋಳ ಹುರಿಯುತ್ತಿದ್ದಾಗ ಬೆಂಕಿಯ ಕಿಡಿ ಹಾರಿ ಇಡೀ ಗುಡಿಸಲಿಗೆ ಬೆಂಕಿ ಹತ್ತಿಕೊಂಡಿದೆ. ಪರಿಣಾಮ ಗುಡಿಸಲಿನಲ್ಲಿದ್ದ ಮಕ್ಕಳು ಸಜೀವ ದಹನವಾಗಿದ್ದಾರೆ.

ಈ ಘಟನೆ ನಡೆದ ತಕ್ಷಣ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರೂ, ಮಕ್ಕಳನ್ನು ಉಳಿಸಲು ಸಾಧ್ಯವಾಗಿಲ್ಲ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಬೆಂಕಿ ನಂದಿಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

- Advertisement -

Latest News

error: Content is protected !!