Thursday, June 4, 2026
Homeತಾಜಾ ಸುದ್ದಿಎಸ್ಐ ವಿರುದ್ಧ ಮೂತ್ರ ಕುಡಿಸಿದ ಆರೋಪ ಹೊರಿಸಿದ ಯುವಕನ ವಿರುದ್ಧವೇ ಮಹಿಳೆಯಿಂದ ಎಫ್‌ಐಆರ್ ದಾಖಲು

ಎಸ್ಐ ವಿರುದ್ಧ ಮೂತ್ರ ಕುಡಿಸಿದ ಆರೋಪ ಹೊರಿಸಿದ ಯುವಕನ ವಿರುದ್ಧವೇ ಮಹಿಳೆಯಿಂದ ಎಫ್‌ಐಆರ್ ದಾಖಲು

- Advertisement -
- Advertisement -

ಮೂಡಿಗೆರೆ: ಚಿಕ್ಕಮಗಳೂರು ಜಿಲ್ಲೆ ಕಿರುಗುಂದ ಗ್ರಾಮದ ದಲಿತ ಯುವಕನ ಮೇಲೆ ಗೋಣಿಬೀಡು ಪೊಲೀಸ್ ಠಾಣಾಧಿಕಾರಿ ದೌರ್ಜನ್ಯ ಎಸಗಿದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ.

ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪಕ್ಕೆ ಸಂಬಂಧಿಸಿ ಯುವಕ ಪುನೀತ್ ವಿರುದ್ಧವೇ ಕಿರುಗುಂದ ಗ್ರಾಮದ ಮಹಿಳೆ ದೂರು ನೀಡಿದ್ದಾಳೆ. ಈ ಕಾರಣಕ್ಕಾಗಿ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ನನ್ನ ಸಂಸಾರ ಹಾಳಾಗುವುದಕ್ಕೆ ಯುವಕ ಪುನೀತ್ ಕಾರಣ. ತನಗೆ ಲೈಂಗಿಕವಾಗಿ ಸಹಕರಿಸುವಂತೆ ಪದೇಪದೆ ನನ್ನನ್ನು ಒತ್ತಾಯಿಸುತ್ತಿದ್ದ. ತನ್ನ ಜತೆ ಬರುವಂತೆ ಕೂಡ ಪುನೀತ್ ಒತ್ತಾಯ ಮಾಡ್ತಿದ್ದ. ಪುನೀತ್ ಪ್ರಕರಣ ಬಯಲಾದ ಬಳಿಕ ನನ್ನ ವಿಚಾರವೂ ಎಲ್ಲರಿಗೂ ಗೊತ್ತಾಗಿದೆ. ಆತ ನನ್ನೊಂದಿಗೆ ಮಾತನಾಡಿರುವ ಆಡಿಯೋ ಕೂಡ ಗೊತ್ತಾಗಿದೆ. ಇದರಿಂದ ನನ್ನ ಮಾನ ಮರ್ಯಾದೆ ಹಾಳಾಗಿದೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಹೀಗಾಗಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಪುನೀತ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

- Advertisement -

Latest News

error: Content is protected !!