Thursday, May 16, 2024
Homeತಾಜಾ ಸುದ್ದಿಖ್ಯಾತ ನಿರ್ಮಾಪಕ ಕೆ.ಮಂಜು ವಿರುದ್ಧ ಎಫ್ ಐಆರ್ ದಾಖಲು

ಖ್ಯಾತ ನಿರ್ಮಾಪಕ ಕೆ.ಮಂಜು ವಿರುದ್ಧ ಎಫ್ ಐಆರ್ ದಾಖಲು

spot_img
- Advertisement -
- Advertisement -

ಬೆಂಗಳೂರು: ಹಣ ಪಡೆದು ವಂಚನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಖ್ಯಾತ ನಿರ್ಮಾಪಕ ಕೆ.ಮಂಜು ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ನಿರ್ಮಾಪಕ ಪುಟ್ಟರಾಜು ಎನ್ನುವವರು ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಕೆ.ಮಂಜು ಹಾಗೂ ಇನ್ನೋರ್ವ ಆರೋಪಿ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ.2018ರಲ್ಲಿಯೇ ನಿರ್ಮಾಪಕ ಕೆ.ಮಂಜು 1.10 ಕೋಟಿ ಹಣ ಪಡೆದಿದ್ದಾರೆ. ಇನ್ನೋರ್ವ ಆರೋಪಿ ರಾಜಗೋಪಾಲ್ 68 ಲಕ್ಷ ಹಣ ಪಡೆದು ವಂಚಿಸಿದ್ದಾರೆ. ಹಣ ವಾಪಸ್ ನೀಡುವಂತೆ ಕೇಳಿದರೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದ್ದಾರೆ.

ದೂರಿನ ಹಿನ್ನೆಲೆಯಲ್ಲಿ ನಿರ್ಮಾಪಕ ಕೆ.ಮಂಜು ವಿರುದ್ಧ ಐಪಿಸಿ ಸೆಕ್ಷನ್ 420, 506 ಹಾಗೂ 34ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!