Thursday, June 4, 2026
Homeತಾಜಾ ಸುದ್ದಿಕನ್ನಡದ ಖ್ಯಾತ ಯುವ ನಿರ್ದೇಶಕ ಕಿಡ್ನಿ ವೈಫಲ್ಯದಿಂದ ನಿಧನ

ಕನ್ನಡದ ಖ್ಯಾತ ಯುವ ನಿರ್ದೇಶಕ ಕಿಡ್ನಿ ವೈಫಲ್ಯದಿಂದ ನಿಧನ

- Advertisement -
- Advertisement -

ಬೆಂಗಳೂರು: ರೋರಿಂಗ್​ ಸ್ಟಾರ್​ ಶ್ರೀಮುರುಳಿ ನಟನೆಯ ಕಂಠಿ ಸಿನಿಮಾದ ಯುವ ನಿರ್ದೇಶಕ ಭರತ್ ನಿಧನರಾಗಿದ್ದಾರೆ.

ಭರತ್ ಕಳೆದ ಕೆಲವು ಸಮಯದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರಪ. ಇನ್ನು ಕಳೆದ ಒಂದು ವಾರದಿಂದ ಅವರ ಆರೋಗ್ಯ ತೀವ್ರ ಹದಗೆಟ್ಟಿತ್ತು. ಹಾಗಾಗಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ನಿನ್ನೆ ರಾತ್ರಿ 11 ಗಂಟೆ ವೇಳೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಶ್ರೀಮುರುಳಿ ಅಭಿನಯದ ಕಂಠಿ ಸಿನಿಮಾ ಹಾಗೂ ರವಿಚಂದ್ರನ್​ ಪುತ್ರ ಮನೋರಂಜನ್ ನಟನೆಯ ಸಾಹೇಬ ಚಿತ್ರಕ್ಕೂ‌ ಭರತ್​ ನಿರ್ದೇಶನ ಮಾಡಿದ್ದರು. ಭರತ್​ ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.ಇನ್ನು ಯುವ ನಿರ್ದೇಶಕನ ಅಕಾಲಿಕ ಮರಣಕ್ಕೆ ಕನ್ನಡ ಚಿತ್ರರಂಗದ ಅನೇಕರು ಕಂಬನ ಮಿಡಿದಿದ್ದಾರೆ.

- Advertisement -

Latest News

error: Content is protected !!