Friday, June 5, 2026
Homeಕರಾವಳಿಕಾಸರಗೋಡುಕಾಸರಗೋಡಿನಲ್ಲಿ ಕೊರೊನಾ ಲಸಿಕೆ ವಿಚಾರಕ್ಕೆ ಮಾರಾಮಾರಿ!

ಕಾಸರಗೋಡಿನಲ್ಲಿ ಕೊರೊನಾ ಲಸಿಕೆ ವಿಚಾರಕ್ಕೆ ಮಾರಾಮಾರಿ!

- Advertisement -
- Advertisement -

ಕಾಸರಗೋಡು: ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರು ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶುಕ್ರವಾರ ಲಸಿಕೆ ನೀಡುತ್ತಿದ್ದ ಸಂಧರ್ಭದಲ್ಲಿ ಲಸಿಕೆ ವಿಚಾರದಲ್ಲಿ ಯುವಕರು ಹೊಡೆದಾಡಿಕೊಂಡಿದ್ದಾರೆ.

ಮೊಗ್ರಾಲ್ ಪಂಚಾಯತ್ ವ್ಯಾಪ್ತಿಯ ಮೊದಲ ಮತ್ತು ಎರಡನೇ ವಾರ್ಡಿನ ವರಿಗೆ ಶುಕ್ರವಾರ ವ್ಯಾಕ್ಸಿನ್ ನೀಡಲು ತೀರ್ಮಾನಿಸಲಾಗಿದ್ದು,ಈ ಎರಡು ವಾರ್ಡ್ ನವರ ಜೊತೆಗೆ ಬೇರೆ ವಾರ್ಡಿನವರು ಕೂಡ ಲಸಿಕೆ ಪಡೆಯಲು ಬಂದಿದ್ದರು.

ಇದೇ ವಿಚಾರದಲ್ಲಿ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವವರೆಗೂ ಹೋಗಿದೆ . ಪರಸ್ಪರ ಕಿತ್ತಾಡಿಕೊಂಡಿದ್ದನ್ನು ಅಲ್ಲಿನ ಸ್ಥಳೀಯರು ವಿಡಿಯೋ ಮಾಡಿದ್ದು, ವಿಡಿಯೋ ವೈರಲ್ ಆಗಿದೆ .

ಹೊಡೆದಾಟದಿಂದಾಗಿ ಕೆಲವು ಗಂಟೆಗಳ ಕಾಲ ವ್ಯಾಕ್ಸಿನ್ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಬಳಿಕ ಪೊಲೀಸರ ಭದ್ರತೆಯಲ್ಲಿ ವ್ಯಾಕ್ಸಿನ್ ನೀಡಲಾಯಿತು.


- Advertisement -

Latest News

error: Content is protected !!