Saturday, June 6, 2026
Homeಕರಾವಳಿಮಂಗಳೂರು: ಕದ್ರಿ ಪರಿಸರದ ಹತ್ತಕ್ಕೂ ಅಧಿಕ ಅಕ್ರಮ ಗೂಡಂಗಡಿಗಳ ತೆರವು ಕಾರ್ಯಾಚರಣೆ !!

ಮಂಗಳೂರು: ಕದ್ರಿ ಪರಿಸರದ ಹತ್ತಕ್ಕೂ ಅಧಿಕ ಅಕ್ರಮ ಗೂಡಂಗಡಿಗಳ ತೆರವು ಕಾರ್ಯಾಚರಣೆ !!

- Advertisement -
- Advertisement -

ಮಂಗಳೂರು, ಜು.31: ಕದ್ರಿ ಪಾರ್ಕ್ ಬಳಿಯ ಅಕ್ರಮ ಗೂಡಂಗಡಿಗಳನ್ನು ಮನಪಾ, ಕಂದಾಯ ಅಧಿಕಾರಿಗಳ ತಂಡ ಶನಿವಾರ ತೆರವುಗೊಳಿಸಿದೆ.

ಪಾರ್ಕ್ ಮುಂಭಾಗದಲ್ಲಿದ್ದ 10ಕ್ಕೂ ಅಧಿಕ ಅಕ್ರಮ ಗೂಡಂಗಡಿಗಳನ್ನು ಸಾರ್ವಜನಿಕ‌ರ ದೂರಿನ ಮೇರೆಗೆ ಅಧಿಕಾರಿಗಳು ಪೊಲೀಸ್ ರಕ್ಷಣೆಯಲ್ಲಿ ತೆರವುಗೊಳಿಸಿದ್ದಾರೆ. ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್‌ರವರ ಸೂಚನೆಯಂತೆ ಕಂದಾಯ ಅಧಿಕಾರಿಗಳ ನೇತೃತ್ವದಲ್ಲಿ ತೆರವು ನಡೆಸಿದ್ದಾರೆ.

ಸ್ಮಾಟ್ ಸಿಟಿ ಯೋಜನೆಯಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಫುಡ್ ಕೋರ್ಟ್‌ಗಳ ಕಾಮಗಾರಿ ನಡೆಸಲಾಗುತ್ತದೆ ಎಂದು ಹೇಳಲಾಗುತ್ತಿದ್ದು ಈ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎನ್ನುವ ಸುದ್ದಿ ಕೂಡ ಕೇಳಿಬರುತ್ತಿದೆ. ಕಾರ್ಯಾಚರಣೆಯ ಸಂದರ್ಭ ಮನಪಾ ಕಂದಾಯ ಅಧಿಕಾರಿ ಪ್ರವೀಣ್ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.

- Advertisement -

Latest News

error: Content is protected !!