Sunday, June 7, 2026
Homeಕರಾವಳಿಮಂಗಳೂರು: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹಾಲಿನ ಬೂತ್ ಬೆಂಕಿಗಾಹುತಿ!

ಮಂಗಳೂರು: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹಾಲಿನ ಬೂತ್ ಬೆಂಕಿಗಾಹುತಿ!

- Advertisement -
- Advertisement -

ಮಂಗಳೂರು: ನಗರ ಹೊರವಲಯದ ಕುಲಶೇಖರ ಸಮೀಪದ ಸಿಲ್ವರ್ ಗೇಟ್ ಬಳಿಯ ನಂದಿನಿ ಹಾಲಿನ ಬೂತ್ ನಲ್ಲಿ ಶುಕ್ರವಾರ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹತ್ತಿಕೊಂಡಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಹಾಲಿನ ಉತ್ಪನ್ನಗಳ ಸಹಿತ ಸುಟ್ಟು ಕರಕಲಾಗಿದೆ.

ವಿಕಲಚೇತನರಾಗಿರುವ ವಸಂತ ಕುಮಾರ್ ಎಂಬವರಿಗೆ ಸೇರಿದ ‘ವಿಜೇತ್ ನಂದಿನಿ ಮಿಲ್ಕ್ ಪಾರ್ಲರ್’ ಎಂಬ ಹೆಸರಿನ ಈ‌ ಹಾಲಿನ ಬೂತ್ ಶುಕ್ರವಾರ ರಾತ್ರಿ 9:30ರವರೆಗೆ ತೆರೆದಿತ್ತು ಎನ್ನಲಾಗಿದೆ. ಆದರೆ ತಡರಾತ್ರಿ ಸುಮಾರು 2:25ರ ಬಳಿಕ ಕದ್ರಿ ಅಗ್ನಿಶಾಮಕ ಠಾಣೆಗೆ ಬಂದ ಕರೆಯಂತೆ ಸ್ಥಳಕ್ಕೆ ತೆರಳಿದಾಗ ಹಾಲಿನ ಬೂತ್ ಭಾಗಶಃ ಸುಟ್ಟು ಹೋಗಿತ್ತು.

ಬೂತ್‌ನೊಳಗಿದ್ದ ಸುಮಾರು 500 ಲೀ.ನಷ್ಟು ಹಾಲು ಮತ್ತು ಹಾಲಿನ ಇತರ ಉತ್ಪನ್ನಗಳ ಸಹಿತ ಎಲ್ಲಾ ವಸ್ತುಗಳಿಗೆ ಹಾನಿಯಾಗಿದೆ. ಇದರಿಂದ 2:50 ಲಕ್ಷ ರೂ.ಗಿಂತಲೂ ಅಧಿಕ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಈ ಅವಘಡ ಸಂಭವಿಸಿರಬಹುದು ಎಂದು ಹೇಳಲಾಗಿದೆ.

- Advertisement -

Latest News

error: Content is protected !!