Thursday, June 4, 2026
Homeಕೊಡಗುಕೊಡಗು: ಆಸ್ತಿ ವಿಚಾರಕ್ಕಾಗಿ ಎರಡು ಕುಟುಂಬಗಳ ನಡುವೆ ಗಲಾಟೆ: ಯುವಕನ ಮೇಲೆ ಗುಂಡು ಹಾರಿಸಿ ಕೊಲೆ...

ಕೊಡಗು: ಆಸ್ತಿ ವಿಚಾರಕ್ಕಾಗಿ ಎರಡು ಕುಟುಂಬಗಳ ನಡುವೆ ಗಲಾಟೆ: ಯುವಕನ ಮೇಲೆ ಗುಂಡು ಹಾರಿಸಿ ಕೊಲೆ ಯತ್ನ

- Advertisement -
- Advertisement -

ಕೊಡಗು: ಆಸ್ತಿ ವಿಚಾರಕ್ಕಾಗಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದು ಯುವಕನ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿರುವ ಘಟನೆ ಕೊಡಗು  ಜಿಲ್ಲೆಯ ಮಡಿಕೇರಿ ತಾಲೂಕಿನ ಬಿಳಿಗೇರಿ ಗ್ರಾಮದಲ್ಲಿ ನಡೆದಿದೆ.

ಕಳೆದ ಎರಡು-ಮೂರು ತಿಂಗಳಿನಿಂದ ಆಸ್ತಿ ವಿಷಯದಲ್ಲಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆಯುತ್ತಿತ್ತು. ಆದರೆ ನಿನ್ನೆ ಮಾತ್ರ ಆ ಜಗಳ ತಾರಕ್ಕೇರಿದ್ದು ಯುವಕನ ಮೇಲೆ ಗುಂಡು ಹಾರಿಸಿದ್ದ ಆರೋಪ ಕೇಳಿಬಂದಿದೆ. ಅಲ್ಲದೇ ಗುಂಡು ಹಾರಿಸಿದ ಆರೋಪದಲ್ಲಿ ಮತ್ತೊಬ್ಬ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.


ಹೊಡೆದಾಟದಲ್ಲಿ ನಿಶ್ಚಲ್ ಎಂಬ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು, ನಿಶ್ಚಲ್‌ ಎಂಬ ವ್ಯಕ್ತಿಯ ಕೈ ಮುರಿದಿದ್ದು, ತಲೆಗೂ ಗಂಭೀರ ಪೆಟ್ಟಾಗಿದೆ. ಇದಕ್ಕೂ ಮೊದಲು ನಿಶ್ಚಲ್, ತೀರ್ಥ ಎಂಬಾತನ ಮೇಲೆ ಗನ್‌ನಿಂದ ಶೂಟ್ ಮಾಡಿದ ಆರೋಪವು ಕೇಳಿ ಬಂದಿದ್ದು, ಈ ವೇಳೆ ತೀರ್ಥನ ಕೈಗೆ ಸಣ್ಣ ಗಾಯವಾಗಿದೆ.

- Advertisement -

Latest News

error: Content is protected !!